
ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶದ ಸಹಕಾರ ಸಂಘ ( ಲ್ಯಾಂಪ್ಸ್) ಇದರ 9 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಮಾ.1 ರಂದು 4 ಸ್ಥಾನಗಳಿಗೆ ಚುನಾವಣೆ ನಡೆದು ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ತಲಾ ಎರಡು ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ. ಅವಿರೋಧ ಆಯ್ಕೆಯಾದ ಸ್ಥಾನಗಳ ಪೈಕಿ ಕಾಂಗ್ರೆಸ್ 3 ಮತ್ತು ಬಿಜೆಪಿ 2 ಸ್ಥಾನ ಪಡೆದುಕೊಂಡಿತ್ತು. ಒಟ್ಟು 9 ಸ್ಥಾನಗಳಲ್ಲಿ 5 ಸ್ಥಾನವನ್ನು ಗೆದ್ದುಕೊಂಡ ಕಾಂಗ್ರೆಸ್ 15 ವರ್ಷಗಳ ಬಳಿಕ ಅಧಿಕಾರಕೇರಲಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಗುತ್ತಿಗಾರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕು. ಜ್ಯೋತಿಕಾ 12 ಮತ ಗೆಲುವು ಸಾಧಿಸಿದರೇ ಬಿಜೆಪಿ ಅಭ್ಯರ್ಥಿ ಭವ್ಯ 11 ಮತ ಪಡೆದು ಸೋಲು ಕಂಡರು. ಅಮರ ಪಡ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ನೀಲಮ್ಮ ಕಣಿಪ್ಪಿಲ 25 ಮತ ಪಡೆದು ಗೆಲುವು ಕಂಡರೇ ಬಿಜೆಪಿ ಅಭ್ಯರ್ಥಿ ಶ್ರೀಮತಿ ಶೋಭ ಕೃಷ್ಣ ನಾಯ್ಕ್ ಸೋಲು ಕಂಡರು. ಆಲೆಟ್ಟಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪುಂಡರಿಕ 32 ಮತ ಪಡೆದು ಗೆಲುವು ಸಾಧಿಸಿದರೇ, ಕಾಂಗ್ರೆಸ್ ಅಭ್ಯರ್ಥಿ ವಿಮಲಾಕ್ಷಿ 31 ಮತ ಪಡೆದು ಸೋಲು ಕಂಡರು. ಸುಳ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಿಥುನ್ ಶಾಂತಿನಗರ 22 ಮತ ಪಡೆದು ಗೆಲುವು ಸಾಧಿಸಿದರೇ ,ಕಾಂಗ್ರೆಸ್ ಅಭ್ಯರ್ಥಿ ಭವಾನಿಶಂಕರ 18 ಮತ ಪಡೆದು ಸೋಲು ಕಂಡರು.
ಕಾಂಗ್ರೆಸ್ ಅಭ್ಯರ್ಥಿಗಳಾದ ಮಾಧವ ದೇವರಗದ್ದೆ, ಜಾಶ್ಮಿತ, ಮೋಕ್ಷಿತಾ ಹಾಗೂ ಬಿಜೆಪಿ ಅಭ್ಯರ್ಥಿಗಳಾದ ಐತಪ್ಪ ನಾಯ್ಕ, ಹರ್ಷಿತಾ ಟಿ. ಅವಿರೋಧವಾಗಿ ಆಯ್ಕೆಯಾದವರು.
