- Monday
- March 3rd, 2025

ಹರಿಹರ ಪಲ್ಲತಡ್ಕ ಗ್ರಾ.ಪಂ. ಮಾಜಿ ಸದಸ್ಯ, ಬಿಜೆಪಿ ಪಕ್ಷದ ಸಕ್ರಿಯ ಸದಸ್ಯ ಐನೆಕಿದು ಗ್ರಾಮದ ನವೀನ್ ಕಟ್ರಮನೆ ಇಂದು ಸಂಜೆ ನಿಧನರಾದರು. ಇಂದು ಬೆಳಿಗ್ಗೆ ಅನಾರೋಗ್ಯಕ್ಕೆ ಒಳಗಾದ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ನಿಧನರಾದರೆಂದು ತಿಳಿದುಬಂದಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಫುಡ್...

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪದ ಕಲ್ಚರ್ಪೆಯಲ್ಲಿ ನಿಂತಿದ್ದ ಟೆಂಪೊ ಒಂದಕ್ಕೆ ಮೈಸೂರು ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದದೆ. ಅಪಘಾತದಿಂದ ಕಾರಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಗಾಯಗಳಾಗಿದ್ದು,ಅವರನ್ನು ಸುಳ್ಯ ಆಸ್ಪತ್ರೆಗೆ ಕರೆ ತರಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜೀರ್ಣೋದ್ದಾರ ಸಮಿತಿ ಸಭೆ ಮಾ 2ರಂದು ದೇವಳದಲ್ಲಿ ನಡೆಯಿತು. ಸಭೆಯಲ್ಲಿ ಜಾತ್ರೋತ್ಸವ ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು ಹಾಗೂ ನೂತನ ಜಾತ್ರೋತ್ಸವ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಸಂತೋಷ ಕುತ್ತಮೊಟ್ಟೆ ಆಯ್ಕೆಯಾದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ...

ಗುತ್ತಿಗಾರಿನ ಮುತ್ತಪ್ಪನಗರದಲ್ಲಿರುವ ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ಮಾ.05 ಹಾಗೂ 06 ರಂದು ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ನಡೆಯಲಿದೆ. ಮಾ.05 ರಂದು ಬೆಳಿಗ್ಗೆ 9:00 ಗಂಟೆಗೆ ಗಣಪತಿ ಹವನ, ಸಂಜೆ 4:00 ಗಂಟೆಗೆ ಶ್ರೀ ದೈವಕ್ಕೆ ಪೈಂಗುತ್ತಿ, ಸಂಜೆ 5:30 ರಿಂದ ಶ್ರೀ ಮುತ್ತಪ್ಪ ದೈವದ ನೇಮ, ಪ್ರಸಾದ ವಿತರಣೆ,...

ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯದಲ್ಲಿ ಸಂಸ್ಥೆಯ ದಶ ಸಂಭ್ರಮ ಅಂಗವಾಗಿ ನಡೆದ ದಶ ಕಾರ್ಯಕ್ರಮಗಳು, ಮಹಿಳಾ ಓದುಗರೊಂದಿಗೆ ಒಂದು ದಿನ, ಮಹಿಳಾ ಸಾಹಿತಿಗಳೊಂದಿಗೆ ಸಂವಾದ ಮತ್ತು ಸುಳ್ಯ ತಾಲೂಕಿನ ಮಹಿಳಾ ಸಾಹಿತಿಗಳ ಪರಿಚಯ ಕಾರ್ಯಕ್ರಮ ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಮಾ.3ರಂದು ನಡೆಯಿತು. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು...

ಕಂದ್ರಪ್ಪಾಡಿ ರಾಜ್ಯದೈವ ಪುರುಷ ದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಳಿಕಾಪ್ರಸಾದ್ ಮುಂಡೋಡಿ ಆಯ್ಕೆಯಾಗಿದ್ದಾರೆ. ಸೋಮಶೇಖರ ಕೇವಳ, ಶ್ರೀಮತಿ ಗೀತಾ ತಿಮ್ಮಪ್ಪ ಕಡ್ಯ, ಜಯರಾಮ ಕಡ್ಲಾರ್, ಶ್ರೀಮತಿ ಜಾನಕಿ ಚಿದಾನಂದ ಪೇರಳಕಜೆ, ಯಂ. ಆರ್. ಪುರುಷೋತ್ತಮ ಮುಂಡೋಡಿ, ಅಜಯ್ ವಾಲ್ತಾಜೆ, ಕರುಣಾಕರ ದೇವರಗುಂಡ, ಶೂರಪ್ಪ ದೇವ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದಾರೆ.

ಮಡಪ್ಪಾಡಿಯಿಂದ ಬೆಳಿಗ್ಗೆ 7.00ಗಂಟೆಗೆ ಹೊರಟು ಮರ್ಕಂಜ – ದೊಡ್ಡತೋಟ ಮಾರ್ಗವಾಗಿ ಸುಳ್ಯಕ್ಕೆ ಬಸ್ಸು ಸೇವೆ (03) ಇಂದಿನಿಂದ ಪ್ರಾರಂಭವಾಗಿದೆ. ಇದೀಗ ಮಡಪ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರ ಮೂಲಕ ಮಾಡಿದ ಪ್ರಯತ್ನದ ಫಲವಾಗಿ ಇದೀಗ ಬಸ್ಸು ಸೇವೆಯನ್ನು, ಕರ್ನಾಟಕ ಸಾರಿಗೆ ಇಲಾಖೆ ಆರಂಭಿಸಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಉಷಾ...

ಸುಬ್ರಹ್ಮಣ್ಯ ಮಾ.2: ಸುಬ್ರಹ್ಮಣ್ಯ ಸಮೀಪದ ಸಿರಿಬಾಗಿಲು ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಅವರಿಗೆ ಇಂದು ಆದಿತ್ಯವಾರ ಸನ್ಮಾನ ಸಮಾರಂಭ ಹಾಗೂ ಸತ್ಕಾರ ಕೂಟ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು. ಕಾರ್ಯಕ್ರಮವನ್ನು ಕೊಂಬಾರು ಗ್ರಾಮ...

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿಯವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸದಸ್ಯರುಗಳಾದ ಕೇಶವ ಹೊಸೋಳಿಕೆ, ಪುರುಷೋತ್ತಮ ಬದಿಯಡ್ಕ, ಜಯಾನಂದ ಪಟ್ಟೆ, ಶಿವಪ್ರಸಾದ್ ಕಂದ್ರಪ್ಪಾಡಿ, ಸನತ್ ಮುಳುಗಾಡು, ಉಷಾ ಮಲ್ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ಉಪಸ್ಥಿತರಿದ್ದರು.

All posts loaded
No more posts