- Monday
- April 21st, 2025

33 ಕಾವು - ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.25 ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್...

ಈ ಭೂಮಿಯ ಮೇಲೆ ಸಾವು ಅನ್ನೋದು ಸಾರ್ವಕಾಲಿಕ ಸತ್ಯ, ಹುಟ್ಟಿದವರು ಒಂದಲ್ಲಾ ಒಂದು ದಿನ ಸಾಯಲೇಬೇಕು ಇದು ಎಂದಿಗೂ ಬದಲಿಸಲಾಗದ ಕೃತ್ಯ…ಇಂದು ನಮ್ಮ ಕೈಯಲ್ಲೊಂದು ಸುಂದರವಾದ ಬದುಕಿದೆ, ಆ ಬದುಕನ್ನು ನಾವು ನಮ್ಮವರೊಂದಿಗೆ ಖುಷಿಯಿಂದ ಕಳೆಯಬೇಕಿದೆ, ನಮ್ಮ ಕನಸುಗಳ ಹಿಂದೆ ಸಾಗುತ್ತಾ ಬದುಕಬೇಕಿದೆ, ನಮ್ಮ ಕನಸುಗಳನ್ನು ನಾವು ನನಸಾಗಿಸಿಕೊಂಡು ನಮ್ಮವರ ಕಣ್ಣಿನಲ್ಲಿ ಸಂತೋಷವನ್ನು ತರಬೇಕಿದೆ…ಕೊನೆಯೇ ತಿಳಿಯದ...

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಯ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ವ್ಯವಸ್ಥಾಪನ ಸಮಿತಿಯ ನೂತರ ಸದಸ್ಯರುಗಳಾಗಿ ಕೇಶವ ಹೊಸೋಳಿಕೆ, ಮಿತ್ರದೇವ ಮಡಪ್ಪಾಡಿ, ಪುರುಷೋತ್ತಮ ಬದಿಯಡ್ಕ, ಜಯಾನಂದ ಪಟ್ಟೆ, ಶಿವಪ್ರಸಾದ್ ಕಂದ್ರಪ್ಪಾಡಿ ರುದ್ರ ಚಾಮುಂಡಿ, ಸನತ್ ಮುಳುಗಾಡು, ಶ್ರೀಮತಿ ಉಷಾ ಪುರುಷೋತ್ತಮ ಮಲ್ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ಸಮಿತಿ...

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಫೆ.23 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತಂಡ ಎಲ್ಲಾ 12 ಸ್ಥಾನ ಪಡೆದು ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ನಡೆಯಿತು. ಪಟಾಕಿ ಸಿಡಿಸಿ, ಪೇಟೆಯಲ್ಲಿ ಮೆರವಣಿಗೆ ಸಾಗಿ ಸಂಭ್ರಮಿಸಿದರು. ಗೆಲುವು ಸಾಧಿಸಿದ ಹಾಲಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ,...

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಫೆ.23 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತಂಡ 12 ಸ್ಥಾನ ಪಡೆದು ಭರ್ಜರಿ ಗೆಲುವು ದಾಖಲಿಸಿದ್ದು ಕಾಂಗ್ರೆಸ್ ಬೆಂಬಲಿತ ಸಹಕಾರ ಭಾರತ ತಂಡ,ಹಾಗೂ ಪಕ್ಷೇತರರು ಸೋಲು ಕಂಡಿದ್ದಾರೆ. ಸಹಕಾರ ಭಾರತಿ ಅಭ್ಯರ್ಥಿಯಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಹಾಲಿ ಅಧ್ಯಕ್ಷ ವೆಂಕಟ್...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವತಿಯಿಂದ ಚಿಂತನ ದಿನಾಚರಣೆ ಮತ್ತು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಗೆ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರವನ್ನು ಫೆ.22ರಂದು ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಇಲ್ಲಿ ಆಯೋಜಿಸಲಾಯಿತು. 84 ಸ್ಕೌಟ್ಸ್ ಮತ್ತು 105 ಗೈಡ್ಸ್ ಪರೀಕ್ಷಾ ಶಿಬಿರದಲ್ಲಿ...
ಸುಳ್ಯದ ಬಹುಮುಖಿ ಪ್ರತಿಭೆ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ ನವಿರಾದ ಪ್ರೇಮ ಪ್ರೀತಿಗಳ ಭಾವನೆಯುಳ್ಳ ಸಿನಿಮಾ "ಭಾವ ತೀರ ಯಾನ" ಫೆ.21 ರಂದು ರಾಜ್ಯಾದ್ಯಾಂತ ತೆರೆ ಕಂಡು ಹೌಸ್ ಫುಲ್ ಪ್ರದರ್ಶನ ನೀಡಿದೆ.ಈ ಚಿತ್ರಕ್ಕೆ ಪುತ್ತೂರಿನ GL ONE Mallನ ಭಾರತ್ ಸಿನಿಮಾಸ್ - Screen 2ರಲ್ಲಿ ಫೆ.21 ಮತ್ತು 22 ರಂದು...
ಮಡಿಕೇರಿ : ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆಬ್ರವರಿ 24 ರಂದು ಬೆಳಗ್ಗೆ 10.30 ರಿಂದ ಅಪರಾಹ್ನ 3 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ‘ಉದ್ಯೋಗ ಮೇಳ’ ನಡೆಯಲಿದೆ.ಈ ಉದ್ಯೋಗ ಮೇಳದಲ್ಲಿ ಮಡಿಕೇರಿ ತಾಜ್ ರೆಸಾರ್ಟ್, ವಿರಾಜಪೇಟೆ ತಾಮರ ರೆಸಾರ್ಟ್, ಮಡಿಕೇರಿ ಕಲ್ಯಾಣಿ ಮೋಟಾರ್ಸ್, ಪ್ಯಾಲೇಸ್ ಟೊಯೋಟಾ ಕಾರ್ ಶೋ ರೂಮ್...

ಗೆಳೆಯರ ಬಳಗ ಐವರ್ನಾಡು ಸಾರಥ್ಯದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟಕ್ಕೆ ಹಿರಿಯ ಕೃಷಿಕ ಕೊರಗಪ್ಪ ಗೌಡ ಪೂಜಾರಿಮನೆ ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದ್ದಾರೆ. ಈಸಂದರ್ಭದಲ್ಲಿ ಗೌರವಾಧ್ಯಕ್ಷ ಎಸ್ ಎನ್ ಮನ್ಮಥ, ಗೆಳೆಯರ ಬಳಗದ ಅಧ್ಯಕ್ಷ ಸಾತ್ವಿಕ್ ಕುದುಂಗು, ಸಂಚಾಲಕ ವಾಸುದೇವ ಬೊಳುಬೈಲು, ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಮತ್ತಿತರರು...

https://youtu.be/1xbZ8hpEu7k?si=0bW9D_7UTKh69p5y ಬಿಸಿಲ ಬೇಗೆಯ ಮಧ್ಯೆ ಇಂದು ಗುತ್ತಿಗಾರಿನಲ್ಲಿ ಇಂದು ಸಂಜೆ ಪ್ರಥಮ ಮಳೆ ಸುರಿದಿದೆ. 20 ನಿಮಿಷಗಳ ಕಾಲ ಸುರಿದ ಮಳೆ ಬಿಸಿಯೇರಿದ ಇಳೆಯನ್ನು ಸ್ವಲ್ಪ ಮಟ್ಟಿಗೆ ತಂಪು ಮಾಡಿದೆ. ಜತೆಗೆ ಅಕಾಲಿಕ ಮಳೆ ಕೃಷಿಕರನ್ನು ಕಂಗೆಡಿಸಿದೆ. ಗುತ್ತಿಗಾರಿನಲ್ಲಿ ಬಿಸಿಲು ಹಾಗೂ ಸೊಸೈಟಿ ಚುನಾವಣೆಯ ಕಾವು ಜೋರಾಗಿದ್ದು ಮಳೆ ಸ್ವಲ್ಪ ತಂಪಾಗಿಸಿದೆ.

All posts loaded
No more posts