Ad Widget

ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಗಬ್ಬಲಡ್ಕ

ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ "ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಗಬ್ಬಲಡ್ಕ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರ ಸೂಚನೆಯಂತೆ ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಚಯರ್ ಮೆನ್ ನಿಕೇತ್ ರಾಜ್ ಮೌರ್ಯ ನೇಮಕಗೊಳಿಸಿದ್ದಾರೆ. ಪ್ರಸ್ತುತ ಇವರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರೋಟರಿ ಸಂಸ್ಥೆಯ ವತಿಯಿಂದ ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದ ಉದ್ಘಾಟನೆ

ರೋಟರಿ ಸಂಸ್ಥೆಯ ವತಿಯಿಂದ ಸೋಣಂಗೇರಿಯಲ್ಲಿ ಸುಮಾರು 3.45 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದ ಉದ್ಘಾಟನೆ ಇಂದು ನಡೆಯಿತು. ರೋಟರಿ ಜಿಲ್ಲಾ 3181 ರ ಗವರ್ನರ್ ವಿಕ್ರಂ ದತ್ತ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಡಾ. ಶಿವಪ್ರಸಾದ್ , ಝೋನ್ 5 ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್ ಕೆ., ರೋ.ಪ್ರಭಾಕರ ನಾಯರ್,...
Ad Widget

ಮಾರ್ಚ್ 1 & 2 ರಂದು ದೇವಶ್ಯ ಗೌಡ ಕಪ್ -2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ

ಮಾರ್ಚ್ 1 ಹಾಗೂ ಮಾರ್ಚ್ 2 ಗುತ್ತಿಗಾರಿನಲ್ಲಿ ಮೂರನೇ ವರ್ಷದ ದೇವಶ್ಯ ಗೌಡ ಕಪ್-2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.ದಕ್ಷಿಣಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಗಳ ಮೂರನೇ ವರ್ಷದ ನಿಗದಿತ ಓವರ್ ಗೌಡ ಮನೆತನಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾರ್ಚ್ 1 ಶನಿವಾರ ಹಾಗೂ ಮಾರ್ಚ್ 2 ಆದಿತ್ಯವಾರ ಗುತ್ತಿಗಾರಿನ ಪಿ.ಎಂ.ಶ್ರೀ ಸರಕಾರಿ ಮಾದರಿ...

ಬೆಳ್ಳಾರೆ : ಅಂಗನವಾಡಿ ಕೇಂದ್ರದಲ್ಲಿ ಹೆಣ್ಣು ಮಗುವನ್ನು ಓದಿಸಿ ಹೆಣ್ಣು ಮಗುವನ್ನು ರಕ್ಷಿಸಿ ಯೋಜನೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಅಂಗನವಾಡಿ ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ ಯೋಜನೆ ಅನುಷ್ಠಾನದಲ್ಲಿ ಮಹಿಳೆಯರು ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಫೆ. 24ರಂದು ನಡೆಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಶ್ರೀಮತಿ ಉಷಾ ಪ್ರಸಾದ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಸರ್ಕಾರದ...

ಅರಂಬೂರು : ವ್ಯಕ್ತಿ ಆತ್ಮಹತ್ಯೆ

ಅರಂಬೂರು ನಿವಾಸಿ ವೆಂಕಟೇಶ್ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ವಿಷಯ ಗೊತ್ತಾಗಿ ತಕ್ಷಣ ಇವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟರೆನ್ನಲಾಗಿದೆ.

ಹೌಸ್ ಫುಲ್ ಪ್ರದರ್ಶನದೊಂದಿಗೆ ವಾರ ಪೂರೈಸಿದ ಭಾವ ತೀರ ಯಾನ –  ಫೆ.28 ರಂದು ಸಂಜೆ ಶೋ ಲಭ್ಯ

ಸುಳ್ಯದ ಬಹುಮುಖಿ ಪ್ರತಿಭೆ ಯುವ ಸಂಗೀತ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ   ನವಿರಾದ ಪ್ರೇಮ ಪ್ರೀತಿಗಳ ಭಾವನೆಯುಳ್ಳ ಸಿನಿಮಾ "ಭಾವ ತೀರ ಯಾನ" ಫೆ.21 ರಂದು ರಾಜ್ಯಾದ್ಯಾಂತ ತೆರೆ ಕಂಡು ಹೌಸ್ ಫುಲ್ ಪ್ರದರ್ಶನದೊಂದಿಗೆ ವಾರ ಪೂರೈಸಿದೆ.  ಪುತ್ತೂರಿನ  ಭಾರತ್ ಸಿನಿಮಾಸ್ ನಲ್ಲಿ  ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಫೆ.28ರಂದು ಸಂಜೆ 4.15...

ಮಾಸ್ ನಿಂದ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಘಟಕ ಆರಂಭ –  ಫೆ.28 ರಂದು ಉದ್ಘಾಟನೆ

ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಂಗಳೂರು ಮಾಸ್ ಲಿಮಿಟೆಡ್ ಇವರಿಂದ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಘಟಕ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭವು ಫೆ.28 ರಂದು ಸುಳ್ಯದ ಎ.ಪಿ.ಎಂ.ಸಿ. ಸಮುದಾಯ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ...

ಏನೆಕಲ್ಲು : ವಿವೇಕ ಜಾಗೃತ ಬಳಗದ ವತಿಯಿಂದ ರಕ್ತದಾನ ಶಿಬಿರ

ವಿವೇಕ ಜಾಗೃತ ಬಳಗ ಏನೆಕಲ್ಲು ಇದರ ವತಿಯಿಂದ ರೋಟರಿ ಕ್ಯಾಮ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಕಾರದೊಂದಿಗೆ ಏನೆಕಲ್ಲಿನ ಆದಿಶಕ್ತಿ ಭಜನಾಮಂದಿರದಲ್ಲಿ ಫೆ.26 ರಂದು ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ತ್ರಿಮೂರ್ತಿಯವರು ಉದ್ಘಾಟಿಸಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು, ವೇದಿಕೆಯಲ್ಲಿ ವಿವೇಕ ಜಾಗೃತ ಬಳಗದ ಅಧ್ಯಕ್ಷರಾದ...

ಗುತ್ತಿಗಾರು ಬೃಹತ್ ರಕ್ತದಾನ ಶಿಬಿರ, ಸನ್ಮಾನ ಮತ್ತು ರಕ್ತ ದಾನಿಗಳಿಗೆ ಗೌರವ  – ರಕ್ತದಾನ ಮಾಡುವ ಮೂಲಕ ಮಾದರಿಯಾದ ಠಾಣಾಧಿಕಾರಿ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಇದರ ವತಿಯಿಂದ ಗ್ರಾಮ ಪಂಚಾಯತ್ ಗುತ್ತಿಗಾರು, ಅರೋಗ್ಯ ಕೇಂದ್ರ ಗುತ್ತಿಗಾರು, ಜಿಲ್ಲಾ ಮತ್ತು ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸುಳ್ಯ ಅಮರ ಸಂಜೀವಿನಿ ಗ್ರಾಮದ ಮಟ್ಟದ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಹಿರಿಯಡ್ಕ, ಸಪ್ತ ಶ್ರೀ ಗುತ್ತಿಗಾರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ...

ಸುಳ್ಯ : ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

ಸುಳ್ಯದ ಕೆವಿಜಿ ದಂತ ಮಹಾವಿದ್ಯಾಲಯದ ಬಿಡಿಎಸ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಸಂಜೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕೃತಿಕಾ ಬಿಜಾಪುರ ಮೂಲದವಳಾಗಿದ್ದು, ಆತ್ಮಹತ್ಯೆ ಹಿಂದೆ ಪುತ್ತೂರಿನ ಪಾಲಿಟೆಕ್ನಿಕ್ ವಿದ್ಯಾರ್ಥಿಯೊರ್ವ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು,. ಸುಳ್ಯ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ‌.
Loading posts...

All posts loaded

No more posts

error: Content is protected !!