- Sunday
- April 20th, 2025

ಕಂದ್ರಪ್ಪಾಡಿ ಜಾತ್ರೋತ್ಸವದ ಪ್ರಯುಕ್ತ ಫೆ16 ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಂದ್ರಪ್ಪಾಡಿಯ ಒಕ್ಕೂಟದ ಸದಸ್ಯರಿಂದ ಶ್ರಮದಾನ ನಡೆಯಿತು. ಸೇವಾಪ್ರತಿನಿಧಿ ತಿಮ್ಮಪ್ಪ ಕಡ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ಕಾಪಿಲ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.17ರಂದು ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಹೊನ್ನಮ್ಮ, ಪತ್ನಿ ಹೇಮಾವತಿ, ಪುತ್ರರಾದ ಮೌರ್ಯ, ಆರ್ಯ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

33 ಕಾವು - ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.18 ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್...

ಈ ಹಿಂದೆ ವಿವಿಧ ಕಡೆಗಳಲ್ಲಿ ನೀಡಲಾಗುತ್ತಿದ್ದ ಆಧಾರ್ ತಿದ್ದುಪಡಿ ಸೇವೆಯನ್ನು ಪ್ರಸ್ತುತ ಬೆಳ್ಳಾರೆಯಲ್ಲಿ ಮಾತ್ರವೇ ಸೀಮಿತಗೊಳಿಸಿದೆ. ಇದರಿಂದ ಜನ ಸಂಕಷ್ಟ ಪಡುವಂತಾಗಿದೆ. ಒಂದು ದಿನಕ್ಕೆ ಕೇವಲ 15 ಮಂದಿಗೆ ಮಾತ್ರವೇ ಟೋಕನ್ ನೀಡಲು ಸಾದ್ಯ ಎಂದು ಅಧಿಕಾರಿಗಳ ಪಟ್ಟು ಹಿಡಿದಿದ್ದರಿಂದ ಜನ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದಿದೆ. ಈಗ ಬಂದಿರುವವರಿಗೆ ಮುಂದಿನ ದಿನಾಂಕಗಳ ಟೋಕನ್...

ಸುಳ್ಯ ತಾಲೂಕಿನ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸುಳ್ಯದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ ಯವರಿಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಸುಳ್ಯ ಶಾಸಕಿ ಮತ್ತು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಮನೆಯಲ್ಲಿ ಕೆಲಸ ಮಾಡುವ ವೇಳೆ ಆಯತಪ್ಪಿ ಬಿದ್ದು ಕಾಲು ಮುರಿತಗೊಂಡು ಮನೆಯಲ್ಲಿ ಕಷ್ಟ ಪಡುತ್ತಿರುವ ಅರಂತೋಡು ಗ್ರಾಮದ ಲೀಲಾವತಿ ಬೆದ್ರಕಾಡು ರವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಆರಂತೋಡು ಘಟಕದ ವತಿಯಿಂದ 30 ಕೆಜಿ ಅಕ್ಕಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಆರಂತೋಡು ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ, ಕಾರ್ಯದರ್ಶಿ ರಾಮಕೃಷ್ಣ ಆರಮನೆಗಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ಉಪಾಧ್ಯಕ್ಷರು,ತಾಲೂಕು...

ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಪದವೀಧರೇತರ ಶಾಲಾ ಮುಖ್ಯೋಪಾಧ್ಯಾಯರ ಸಂಘ (ರಿ ), ಬೆಂಗಳೂರು, ಸುಳ್ಯ ತಾಲೂಕು ಘಟಕದ ಪುನರ್ ರಚನಾ ಸಭೆ ಫೆಬ್ರವರಿ 15 ರಂದು ಸುಳ್ಯ ತಾಲೂಕು ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನಿಂಗರಾಜು.ಕೆ. ಪಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿ ಅಧ್ಯಕ್ಷ ದೇವರಾಜ್ ಎಸ್...

ಸುಳ್ಯ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಫೆ.16ರಂದು ಮಧ್ಯಾಹ್ನ ಕೊಳೆತ ಸ್ಥಿತಿಯಲ್ಲಿ ಕಂಡು ಬಂದ ಶವದ ಗುರುತು ಪತ್ತೆಯಾಗಿದ್ದು, ಪಿರಿಯಾಪಟ್ಟಣದ ಅಜಿತ್ (24) ಎಂದು ತಿಳಿದುಬಂದಿದೆ.ಈತ ಸುಳ್ಯದ ವೆಲ್ಕಮ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನೆಂದೂ, ಕೆಲ ತಿಂಗಳ ಹಿಂದೆ ಊರಿಗೆ ಹೋಗಿದ್ದ. ವಾಪಸು ಕೆಲಸಕ್ಕೆ ಬಂದಿರಲಿಲ್ಲ. ಫೆ.16ರಂದು ಪಯಸ್ವಿನಿ ನದಿ ಹರಿಯುವ ಅಂಗಡಿಮಠ ಗೋಳಿಮೂಲೆ ಎಂಬಲ್ಲಿ...

ಸುಳ್ಯದಲ್ಲಿ ನೇಸರ ಮಿನರಲ್ ವಾಟರ್ ಉದ್ಯಮ ನಡೆಸುತ್ತಿದ್ದ ಯುವಕ ಕೊಲ್ಲಮೊಗ್ರ ಗ್ರಾಮದ ಚಾಂತಾಳ ದಿ.ಗಣಪತಿ ಮಾಸ್ತರ್ ರವರ ಪುತ್ರ ಸಚಿನ್ ಚಾಂತಾಳ (38) ಬ್ರೈನ್ ಹೆಮರೇಜ್ ನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ. ಅಡ್ಕಾರ್ ಕೋನಡ್ಕಪದವು ನಲ್ಲಿ ಮಯೂರ್ ಇಂಡಸ್ಟ್ರೀಸ್ (ನೇಸರ ಮಿನರಲ್ ವಾಟರ್ ) ನಡೆಸುತ್ತಿದ್ದರು. ಮೃತರು ಪತ್ನಿ...

ಕೊಲ್ಲಮೊಗ್ರು ಗ್ರಾಮದ ಜಯಪ್ರಕಾಶ್ ಕಜ್ಜೋಡಿ ಎಂಬುವವರ ರಬ್ಬರ್ ಸ್ಮೋಕ್ ಹೌಸ್ ಗೆ ಫೆ.15 ರಂದು ರಾತ್ರಿ 10 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.ಈ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿದ ಮುಳ್ಳುಬಾಗಿಲು ಬೈಲಿನ ಜನರು, ಹರಿಹರ ಹಾಗೂ ಐನೆಕಿದು ಭಾಗದ ಕೆಲವು ಯುವಕರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದು,...

All posts loaded
No more posts