
ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಂಗಳೂರು ಮಾಸ್ ಲಿಮಿಟೆಡ್ ಇವರಿಂದ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಘಟಕ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭವು ಫೆ.28 ರಂದು ಸುಳ್ಯದ ಎ.ಪಿ.ಎಂ.ಸಿ. ಸಮುದಾಯ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ನಡೆಸಲಿದ್ದಾರೆ. ದ. ಕ ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು ಇದರ ಅದ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಎಸ್. ಎನ್ ಮನ್ಮಥ, ಎ. ಪಿ. ಎಂ. ಸಿ. ಮಾಜಿ ಅಧ್ಯಕ್ಷರಾದ ಎನ್ ಜಯಪ್ರಕಾಶ್ ರೈ, ಕಾರ್ಯದರ್ಶಿ ಎಸ್. ರವೀಂದ್ರ ರವರು ಭಾಗವಹಿಸಲಿದ್ದಾರೆ.
