
ಸುಳ್ಯದ ಬಹುಮುಖಿ ಪ್ರತಿಭೆ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ ನವಿರಾದ ಪ್ರೇಮ ಪ್ರೀತಿಗಳ ಭಾವನೆಯುಳ್ಳ ಸಿನಿಮಾ “ಭಾವ ತೀರ ಯಾನ” ಫೆ.21 ರಂದು ರಾಜ್ಯಾದ್ಯಾಂತ ತೆರೆ ಕಂಡು ಹೌಸ್ ಫುಲ್ ಪ್ರದರ್ಶನದೊಂದಿಗೆ ವಾರ ಪೂರೈಸಿದೆ. ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಫೆ.28ರಂದು ಸಂಜೆ 4.15 ಕ್ಕೆ ಶೋ ನೀಡಲು ನಿರ್ಧರಿಸಲಾಗಿದೆ. ಕೌಂಟರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
