- Wednesday
- February 26th, 2025

ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯದಲ್ಲಿ ಸಂಸ್ಥೆಯ ದಶ ಸಂಭ್ರಮಾಚರಣೆಯ, ದಶ ಕಾರ್ಯಕ್ರಮಗಳ ಅಂಗವಾಗಿ ಚಿಣ್ಣರ ಹಬ್ಬ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಫೆ. 24ರಂದು ನಡೆಯಿತು. ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಉದ್ಘಾಟಿಸಿ ಮಾತನಾಡಿ ಪುಟಾಣಿಗಳ ಮನಸ್ಸನ್ನು ಅರಳಿಸುವುದೇ ಚಿಣ್ಣರ ಹಬ್ಬ ಕಾರ್ಯಕ್ರಮ ಮುಖ್ಯ ಆಶಯ ವಾಗಲಿ ಎಂದರು. ಕರ್ನಾಟಕ...

ಪೆರಾಜೆ ಗ್ರಾಮದ ಪೀಚೆಮನೆ ಪವನಕುಮಾರ್ (50)ರವರು ಅಲ್ಪಕಾಲದ ಅಸೌಖ್ಯದಿಂದ ಫೆ.25 ನಿಧನರಾದರು. ಪತ್ನಿ ಸುಮಕಲಾ, ಪುತ್ರಿ ವೈಷ್ಣವಿ, ಪುತ್ರ ಸುಹಾನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸ್ವಗೃಹದಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.26 ರಂದು ಮಹಾಶಿವರಾತ್ರಿ ಆಚರಣೆ ನಡೆಯಲಿದ್ದು, ಆ ಪ್ರಯುಕ್ತ ಮದ್ಯಾಹ್ನ ಏಕಾದಶ ರುದ್ರಾಭಿಷೇಕ ಹಾಗೂ ರಾತ್ರಿ 7:00 ಗಂಟೆಗೆ ಶಿವಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ.ಸಂಜೆ 6:00 ಗಂಟೆಯಿಂದ ರಾತ್ರಿ 11:00 ಗಂಟೆಯವರೆಗೆ ಹಳೆಕೋಟೆ ಶ್ರೀ ಮಾರಿಯಮ್ಮ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಬೋಳಾರ ಮಂಗಳೂರು ಇವರಿಂದ...