
ಈ ಭೂಮಿಯ ಮೇಲೆ ಸಾವು ಅನ್ನೋದು ಸಾರ್ವಕಾಲಿಕ ಸತ್ಯ, ಹುಟ್ಟಿದವರು ಒಂದಲ್ಲಾ ಒಂದು ದಿನ ಸಾಯಲೇಬೇಕು ಇದು ಎಂದಿಗೂ ಬದಲಿಸಲಾಗದ ಕೃತ್ಯ…
ಇಂದು ನಮ್ಮ ಕೈಯಲ್ಲೊಂದು ಸುಂದರವಾದ ಬದುಕಿದೆ, ಆ ಬದುಕನ್ನು ನಾವು ನಮ್ಮವರೊಂದಿಗೆ ಖುಷಿಯಿಂದ ಕಳೆಯಬೇಕಿದೆ, ನಮ್ಮ ಕನಸುಗಳ ಹಿಂದೆ ಸಾಗುತ್ತಾ ಬದುಕಬೇಕಿದೆ, ನಮ್ಮ ಕನಸುಗಳನ್ನು ನಾವು ನನಸಾಗಿಸಿಕೊಂಡು ನಮ್ಮವರ ಕಣ್ಣಿನಲ್ಲಿ ಸಂತೋಷವನ್ನು ತರಬೇಕಿದೆ…
ಕೊನೆಯೇ ತಿಳಿಯದ ಈ ಬದುಕಿನಲ್ಲಿ ನಾವು ಕೊನೆಯವರೆಗೂ ಬದುಕಬೇಕಿದೆ, ಇಂದು ಬಂದು ನಾಳೆ ಹೋಗುವ ಕಷ್ಟಗಳಿಗೆ ಖುಷಿಯ ತೋರಿಸಿ, ನೋವುಗಳಿಗೆ ನಗುವ ತೋರಿಸಿ ಇರುವ ಒಂದು ಬದುಕಲಿಂದು ನಾವು ಮುಂದೆ ಸಾಗಬೇಕಿದೆ, ಬರುವುದೆಲ್ಲವ ಸ್ವೀಕರಿಸುತ್ತಾ ನಮ್ಮವರೊಂದಿಗೆ ನಾವು ಮುನ್ನಡೆಯಬೇಕಿದೆ…✍️ಉಲ್ಲಾಸ್ ಕಜ್ಜೋಡಿ
