
ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಬೆಳ್ಳಾರೆ, ಜೆಸಿಐ ಬೆಳ್ಳಾರೆ ಮತ್ತು ನಿನಾದ ಸಾಂಸ್ಕೃತಿಕ ಕಲಾ ಕೇಂದ್ರ ತಂಟೆಪ್ಪಾಡಿ ಇವುಗಳ ಆಶ್ರಯದಲ್ಲಿ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ಹಾಗೂ ಆಸಕ್ತ ಶಿಕ್ಷಕಿಯರಿಗೆ ಎರಡು ದಿನಗಳ ರಂಗಚಟುವಟಿಕೆ ಕಾರ್ಯಾಗಾರ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಡೆಯಿತು. ಹಿರಿಯ ಜಾನಪದ ಕಲಾವಿದ ಬಾಬು ಅಜಿಲ ಬಾಳಿಲ ಕಾರ್ಯಾಗಾರವನ್ನು ಉದ್ಘಾಟಿಸಿ ಶುಭಹಾರೈಸಿದರು. ಮೊದಲ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ರಂಗ ಕಲಾವಿಧರುಗಳಾದ ಚಂದ್ರನಾಥ ಬಜಗೋಳಿ ಮತ್ತು ಮಿಥುನ್ ಕುಮಾರ್ ಸೋನ ಅವರನ್ನು ಬೆಳ್ಳಾರೆ ಜೆಸಿಐನ ಪೂರ್ವಾಧ್ಯಕ್ಷ ಕಳಂಜ ವಿಶ್ವನಾಥ ರೈ ಸನ್ಮಾನಿಸಿದರು. ಬೆಳ್ಳಾರೆ ಜೆಸಿಐನ ವ್ಯಕ್ತಿತ್ವ ವಿಕಸನ ವಿಭಾಗದ ನಿರ್ದೇಶಕಿ ಪೂರ್ಣಿಮಾ ಪೆರ್ಲoಪಾಡಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಧ್ಯಕ್ಷ ಜಗದೀಶ ರೈ ಪೆರುವಾಜೆ, ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದ ಸದಸ್ಯೆ ಹರಿಣಿ ವಸಂತ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು. ಬೆಳ್ಳಾರೆ ಜೆಸಿಐನ ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ವಂದಿಸಿದರು. ಪೂರ್ವಾಧ್ಯಕ್ಷ ಪ್ರಸಾದ್ ಸೇವಿತ, ಸದಸ್ಯ ಜೀವನ್ ಕೊಂಡೆಪ್ಪಾಡಿ, ವೇದಿತ್ ರೈ ಸಹಕರಿಸಿದರು.
*ಸಮಾರೋಪ ಸಮಾರಂಭ*
ಎರಡು ದಿನ ನಡೆದ ರಂಗ ಚಟುವಟಿಕೆ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಂಗಕಲಾವಿದ ಧೀರಜ್ ಬೆಳ್ಳಾರೆ ಹಾಗೂ ಕಿರುತೆರೆ ಮತ್ತು ಚಲನಚಿತ್ರ ನಟಿ ಭವ್ಯಶ್ರೀ ಪೂಜಾರಿ ಅವರನ್ನು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಅಧ್ಯಕ್ಷೆ ಉಷಾ ಬಿ ಭಟ್ ಸನ್ಮಾನಿಸಿ ಶುಭಭರೈಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಪೂರ್ಣಿಮಾ ಪೆರ್ಲoಪಾಡಿ ಅಧ್ಯಕ್ಷತೆ ವಹಿಸಿದ್ದರು. ಜಗದೀಶ್ ರೈ ಪೆರುವಾಜೆ, ಹರಿಣಿ ವಸಂತ ಶೆಟ್ಟಿ, ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು.
