
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಎಲಿಮಲೆ ಪೇಟೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಕಾರ್ಯಕರ್ತ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಚುನಾಯಿತಗೊಂಡ ನಿರ್ದೇಶಕಾರದ ಕೃಷ್ಣಯ್ಯ ಮೂಲೆತೋಟ, ಜನಾರ್ಧನ ಅಚ್ರಪ್ಪಾಡಿ ಉಪಸ್ಥಿತರಿದ್ದರು. ವಿಜಯೋತ್ಸವ ಕಾರ್ಯಕ್ರಮದಲ್ಲಿ ಗುತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕಾರದ ಬಿ ಜೆ ಪಿ ಪಕ್ಷದ ಹಿರಿಯರಾದ ಎ ವಿ ತೀರ್ಥರಾಮ ಅಂಬೆಕಲ್ಲು, ಸುಳ್ಯ ಮಂಡಲದ ಯುವ ಮೋರ್ಚಾದ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ದೇವಚಳ್ಳ ಶಕ್ತಿ ಕೇಂದ್ರದ ಸಹ ಪ್ರಮುಖ್ ಇಂದಿರೇಶ ಗುಡ್ಡೆ, ಎಲಿಮಲೆ ಬೂತಿನ ಅಧ್ಯಕ್ಷರು ಉದಯ ಕುಮಾರ್ ಚಳ್ಳ, ಭಜರಂಗದಳದ ಸಂಚಾಲಕರು ಹರಿಪ್ರಸಾದ್ ಎಲಿಮಲೆ, ಮಾವಿನಕಟ್ಟೆ ಭಾಗದ ಕಾರ್ಯಕರ್ತರು ಮತ್ತು ನೆಲ್ಲೂರು ಕೆಮ್ರಾಜೆ ಬೂತಿನ ಕಾರ್ಯಕರ್ತರು ಮತ್ತು ದೇವಚಳ್ಳ ಬೂತಿನ ಕಾರ್ಯಕರ್ತರು ಉಪಸ್ಥಿತರಿದ್ದರು.
