
ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಳಂಜದಲ್ಲಿ ಮಾ.02 ರಂದು ಸಂಜೆ ಗಂಟೆ 4.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಮಕೃಷ್ಣ ಭಟ್ ಚೂಂತಾರು ಅವರ ಶೈಕ್ಷಣಿಕ ಕೃತಿಯನ್ನು ಖ್ಯಾತ ಶಿಕ್ಷಣ ತಜ್ಞ ಪ್ರೊ. ರಾಧಾಕೃಷ್ಣ ಕೆ.ಇ.ಬಿಡುಗಡೆಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ.ಶ್ರೀನಾಥ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಬಳಿಕ ಭಾವಗೀತೆ, ಜಾನಪದ ಗೀತೆ, ಚಲನಚಿತ್ರ ಗೀತೆ ಹಾಗೂ ಭಕ್ತಿಗೀತೆಗಳ ಸುಮಧುರ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ ಖ್ಯಾತ ಗಾಯಕಿ ಸುಪ್ರೀಯ ರಘುನಂದನ್
ಮತ್ತು ಉದಯೋನ್ಮುಖ ಗಾಯಕಿ ಸುಮಾ ಕೋಟೆ ಅವರಿಂದ ಗಾಯನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
