
ಗೆಳೆಯರ ಬಳಗ ಐವರ್ನಾಡು ಸಾರಥ್ಯದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟಕ್ಕೆ ಹಿರಿಯ ಕೃಷಿಕ ಕೊರಗಪ್ಪ ಗೌಡ ಪೂಜಾರಿಮನೆ ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದ್ದಾರೆ. ಈಸಂದರ್ಭದಲ್ಲಿ ಗೌರವಾಧ್ಯಕ್ಷ ಎಸ್ ಎನ್ ಮನ್ಮಥ, ಗೆಳೆಯರ ಬಳಗದ ಅಧ್ಯಕ್ಷ ಸಾತ್ವಿಕ್ ಕುದುಂಗು, ಸಂಚಾಲಕ ವಾಸುದೇವ ಬೊಳುಬೈಲು, ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಹಾಗೂ ಅಂತಾರಾಜ್ಯದ ತಂಡಗಳು ಆಗಮಿಸಿದೆ. ಕೇರಳ ,ತಮಿಳುನಾಡಿನ ಬಲಿಷ್ಟ ತಂಡಗಳು ಸೇರಿದಂತೆ 12 ತಂಡಗಳು ಪ್ರೇಕ್ಷಕರಿಗೆ ಕಬಡ್ಡಿಯ ರಸದೌತಣ ನೀಡಲು ಸಜ್ಜಾಗಿದೆ.
ಸುತ್ತಲು ಸುಂದರ ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು ಪ್ರೇಕ್ಷಕರಿಗೆ ಉತ್ತಮ ವ್ಯವಸ್ಥೆ ಮಾಡಲಾಗಿದೆ.
ವಿಜೇತ ತಂಡಗಳಿಗೆ ಪಂದ್ಯಾಟದ ಪ್ರಥಮ ನಗದು ಬಹುಮಾನ ರೂ.70,000 ದ್ವಿತೀಯ ರೂ.50,000 ತೃತೀಯ ರೂ.,25,000 ಚತುರ್ಥ ರೂ 25,000 ಹಾಗೂ ಶಾಶ್ವತ ಫಲಕ ದೊರೆಯಲಿದೆ
