- Saturday
- February 22nd, 2025

ಬಿಸಿಲ ಬೇಗೆಯ ಮಧ್ಯೆ ಇಂದು ಗುತ್ತಿಗಾರಿನಲ್ಲಿ ಇಂದು ಸಂಜೆ ಪ್ರಥಮ ಮಳೆ ಸುರಿದಿದೆ. 20 ನಿಮಿಷಗಳ ಕಾಲ ಸುರಿದ ಮಳೆ ಬಿಸಿಯೇರಿದ ಇಳೆಯನ್ನು ಸ್ವಲ್ಪ ಮಟ್ಟಿಗೆ ತಂಪು ಮಾಡಿದೆ. ಜತೆಗೆ ಅಕಾಲಿಕ ಮಳೆ ಕೃಷಿಕರನ್ನು ಕಂಗೆಡಿಸಿದೆ. ಗುತ್ತಿಗಾರಿನಲ್ಲಿ ಬಿಸಿಲು ಹಾಗೂ ಸೊಸೈಟಿ ಚುನಾವಣೆಯ ಕಾವು ಜೋರಾಗಿದ್ದು ಮಳೆ ಸ್ವಲ್ಪ ತಂಪಾಗಿಸಿದೆ.

ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಳಂಜದಲ್ಲಿ ಮಾ.02 ರಂದು ಸಂಜೆ ಗಂಟೆ 4.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಮಕೃಷ್ಣ ಭಟ್ ಚೂಂತಾರು ಅವರ ಶೈಕ್ಷಣಿಕ ಕೃತಿಯನ್ನು ಖ್ಯಾತ ಶಿಕ್ಷಣ ತಜ್ಞ ಪ್ರೊ. ರಾಧಾಕೃಷ್ಣ ಕೆ.ಇ.ಬಿಡುಗಡೆಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ.ಶ್ರೀನಾಥ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಭಾವಗೀತೆ,...

ನಗರಗಳಲ್ಲಿ ಎಲ್ಲಾ ನಿವೇಶನಗಳಿಗೆ ಎ ಖಾತಾ ಹಾಗೂ ಬಿ ಖಾತಾ ಎಂದು ವರ್ಗಿಕರಿಸಿ ಸರಕಾರವು ಅಧಿಸೂಚನೆ ಹೊರಡಿಸಿ ತುರಾತುರಿಯಲ್ಲಿ ಬಿ ಖಾತಾ ನೀಡಲು ಆಂದೋಲನ ಕ್ಕೆ ಆದೇಶ ನೀಡಿರುವುದು ಜನಗಳ ಕಣ್ಣೊರೆಸುವ ತಂತ್ರವಷ್ಟೇ ಆಗಿದೆ. ಇದರ ಒಳತಂತ್ರ ಖಾಲಿಯಾಗಿರುವ ಸರಕಾರದ ಖಜಾನೆ ತುಂಬಲು ಇನ್ನೊಂದು ಮಾರ್ಗವಷ್ಟೇ ಆಗಿದೆ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ...

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.ಜಾತ್ರೋತ್ಸವದ ಮೊದಲ ದಿನವಾದ ಫೆ.20 ಗುರುವಾರದಂದು ಬೆಳಿಗ್ಗೆ ಮೆರವಣಿಗೆಯ ಮೂಲಕ ಶ್ರೀ ದೇವರಿಗೆ ಹಸಿರು ಕಾಣಿಕೆ ಸಮರ್ಪಣೆ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ,...

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, v4 ನ್ಯೂಸ್ ಮತ್ತು ಎಂ.ಬಿ ಫೌಂಡೇಶನ್ ಸಹಯೋಗದಲ್ಲಿ ನಡೆಸಿದ ಅರೆ ಭಾಷೆ ಕಾಮಿಡಿ ಸೀಸನ್ 1 ಆಡಿಶನ್ ಶೋ ದಲ್ಲಿ ಕೆ. ಎಸ್ .ಎಸ್ ಕಾಲೇಜಿನ ತಂಡ ಆಯ್ಕೆಯಾಗಿದೆ. ಸಂಸ್ಥೆಯ ಪ್ರಾಂಶುಪಾಲ ಡಾ ದಿನೇಶ ಪಿ.ಟಿ ಅವರ ಸಹಕಾರದೊಂದಿಗೆ ಕನ್ನಡ ವಿಭಾಗದ ಉಪನ್ಯಾಸಕಿ ಸುಮಿತ್ರ ಅವರ ಮಾರ್ಗದರ್ಶನದಲ್ಲಿ...

ದೇವಚಳ್ಳ ಗ್ರಾಮದ ತಳೂರು ಪೂಜಾರಿಮನೆ ಟಿ. ಪಿ. ಚಂದ್ರಶೇಖರ (ಪುಟ್ಟ) ಎಂಬವರು ಫೆ.21 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಚಂದ್ರಶೇಖರ ರವರು ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣ ಮನೆಯವರು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋದರು. ಅಲ್ಲಿಯೂ ಅವರಿಗೆ...

ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ ಶ್ರೀಮತಿ ಯಸ್.ಜಾನಕಿ ಯವರು ಇತ್ತೀಚೆಗೆ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿದರು.ಇವರನ್ನು ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್ ಹಾಗೂ ಸುಬ್ರಹ್ಮಣ್ಯದ ನಾಗರಿಕರ ಪರವಾಗಿ ಗ್ರಾಮ ಪಂಚಾಯಿತ್ ಸದಸ್ಯ ಹರೀಶ ಇಂಜಾಡಿಯವರು ಶಾಲು, ಪ್ರಸಾದ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಜಯರಾಮ ರಾವ್,...

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ಬಳಿ ಕಾರೊಂದು ಢಿಕ್ಕಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು , ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಕಾರು ಜಖಂಗೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ವಲಯದ ಕಲ್ಮಕಾರು ಗ್ರಾಮದ ಕಿಲಾರ್ಕಜೆ ಎಂಬಲ್ಲಿ ವಾಸ ಮಾಡುತ್ತಿರುವ ರುಕ್ಮಯ್ಯ S/o ರಾಮಪ್ಪ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ರಚನೆ ಮಾಡಿ ಹಸ್ತಾಂತರ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ...

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಇಂದು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭ ಅವರನ್ನು ಸುಳ್ಯ ಪ್ರೆಸ್ ಕ್ಲಬ್ಬಿಗೆ ಆಹ್ವಾನಿಸಿದ ಮೇರೆಗೆ ಅವರು ಪ್ರೆಸ್ ಕ್ಲಬ್ಬಿಗೆ ಭೇಟಿ ನೀಡಿದರು. ಅಲ್ಲಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತಲ್ಲದೆ ಪ್ರೆಸ್ ಕ್ಲಬ್ಬಿನ ವತಿಯಿಂದ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸುಸಜ್ಜಿತ ಗ್ರಂಥಾಲಯ ರಚನೆಯ ಯೋಜನೆಗೆ ನೆರವು ನೀಡುವಂತೆ...

All posts loaded
No more posts