
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ನಾಯಕರಿಗೆ ಒಂದು ದಿನದ “ಲೀಡ್ ಒನ್” ನಾಯಕತ್ವ ತರಬೇತಿ ಶಿಬಿರವು ಸುಳ್ಯದ ಗ್ರಾಂಡ್ ಪರಿವಾರ್ ಸಭಾಭವನದಲ್ಲಿ ನಡೆಯಿತು. ಬೆಳಿಗ್ಗೆ 9:30ಕ್ಕೆ ಸಭಾ ಕಾರ್ಯಕ್ರಮದೊಂದಿಗೆ ಆರಂಭವಾದ ಶಿಬಿರವು ಸಾಯಂಕಾಲ 6:00ವರೆಗೆ ನಡೆಯಿತು.
ಮಂಗಳೂರು ಗ್ರಾಮಾಂತರ ಜಿಲ್ಲಾ ಸದಸ್ಯರಾದ ಅಬ್ದುಲ್ ಕಲಾಂ ರವರು ಪ್ರಸ್ತಾವಿಕವಾಗಿ ಮಾತನಾಡಿ ಮೆಲಸ್ಥರದ ನಾಯಕರ ಚಟುವಟಿಕೆಗಳಿಗೆ ತಳಮಟ್ಟದ
ನಾಯಕರು ಸದಾ ಬೆಂಬಲ ನೀಡುತ್ತಿರಬೇಕು ಎಂಬ ಸಲಹೆಗಳನ್ನು ನೀಡಿದರು.
ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಮೀರಝ್ ಸುಳ್ಯ ರವರು ಮಾತನಾಡಿ ಪಕ್ಷ ಬಲವರ್ಧನೆಯಲ್ಲಿ ಬ್ರಾಂಚ್ ಮಟ್ಟದ ನಾಯಕರು ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು. ಕಿವಿ ಮಾತನ್ನು ಹೇಳಿದರು.
ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದಾತ್, ಉಪಾಧ್ಯಕ್ಷರಾದ ಮೂನಿಶ್ ಅಲಿ, ಸದಸ್ಯರಾದ ಅಶ್ರಫ್ ತಲಪಾಡಿ, ಸಲೀಂ ಗುರುವಾಯನಕೆರೆ, ಹಮೀದ್ ಸಾಲ್ಮರ ಮುಂತಾದವರು ನಾಯಕರುಗಳಿಗೆ ಬೇರೆ ಬೇರೆ ವಿಷಯಗಳ ತರಬೇತಿಯನ್ನು ನೀಡಿದರು. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾದ ರಫೀಕ್ ಎಂ.ಎಸ್ ರವರು ಸ್ವಾಗತಿಸಿ, ಕಾರ್ಯದರ್ಶಿಯವರಾದ ಸಿದ್ಧಿಕ್ ಕೊಡಿಯಮ್ಮೆ ಧನ್ಯವಾದ ಅರ್ಪಣೆ ಮಾಡಿದರು. ಮಾಧ್ಯಮ ಉಸ್ತುವಾರಿಗಳಾದ ಆಶ್ರಫ್ ಟರ್ಲಿ ಯವರು ಕಾರ್ಯಕ್ರಮ ನಿರೂಪಣೆ ಮಾಡಿದರು.
