
ಕರಾವಳಿಯ ಯುವ ಪ್ರತಿಭೆ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಕಾಲಿರಿಸಿದ ಮಯೂರ ಅಂಬೆಕಲ್ಲು ಸಾಧನೆಯ ಇನ್ನೊಂದು ಮೆಟ್ಟಿಲೇರಿದ್ದಾರೆ. ನೂತನ ಸಿನಿಮಾ ನಿರ್ಮಾಣ ಮಾಡುವ ಮೂಲಕ ಕರಾವಳಿಯ ಮನಗೆದ್ದಿದ್ದಾರೆ. ಫೆ.21 ರಂದು ರಾಜ್ಯಾದ್ಯಾಂತ ತೆರೆ ಕಾಣಲಿರುವ “ಭಾವ ತೀರ ಯಾನ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ನ ಯುವ ಕಲಾವಿದನಾಗಿ ಮಾಡಿ ಬರಲಿದ್ದಾರೆ. ಅವರೇ ಕತೆ, ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ್ದು ಕರಾವಳಿಯಾದ್ಯಂತ ಬ್ಯಾನರ್ ಕಟೌಟ್ ಗಳು ಚಲನಚಿತ್ರಕ್ಕೆ ಬೆಂಬಲವಾಗಿದೆ. ಸುಳ್ಯ, ಪುತ್ತೂರು , ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಸೇರಿದಂತೆ ನೂರಾರು ಬ್ಯಾನರ್ ಗಳು ಯುವ ಕಲಾವಿದನ ಸಾಧನೆಗೆ ಹಾರೈಕೆಯ ಯಾನವನ್ನೇ ಆರಂಭಿಸಿದೆ.
ಪುತ್ತೂರಿನ GL ONE Mallನ ಭಾರತ್ ಸಿನಿಮಾಸ್ – Screen 2ರಲ್ಲಿ ಬಿಡುಗಡೆಯಾಗಲಿದ್ದು, ಫೆ.21 ರಂದು ಶುಕ್ರವಾರ ಸಂಜೆ ಗಂಟೆ 3.45 ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಯುವ ಕಲಾವಿದನ ಸಿನೇಮಾ ನೋಡುವ ಮುಖಾಂತರ ಅವರ ಸಾಧನೆಯ ಯಾನಕ್ಕೆ ಎಲ್ಲರೂ ಬೆಂಬಲಿಸಲಿ ಎಂಬುದೇ ನಮ್ಮ ಆಶಯ.
