
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ನೂತನ ಅಧ್ಯಕ್ಷರಾಗಿ ಮಹೇಶ್ ಬೆಳ್ಳಾರ್ಕರ್ ಇವರನ್ನು ಸುಳ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರ ಶಿಫಾರಸು ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಪ. ಜಾ. ವಿಭಾಗದ ಅಧ್ಯಕ್ಷರ ಅನುಮೋದನೆ ಮೇರೆಗೆ ಕೆ.ಪಿ.ಸಿ.ಸಿ. ಪ. ಜಾ. ವಿಭಾಗದ ರಾಜ್ಯಾಧ್ಯಕ್ಷರಾದ ಆರ್. ಧರ್ಮಸೇನರವರು ನೇಮಕ ಮಾಡಿ ಅದೇಶಿಸಿರುತ್ತಾರೆ.
ಫೆಬ್ರುವರಿ 18 ರಂದು ಮಂಗಳೂರಿನಲ್ಲಿ ನಡೆದ ದ.ಕ. ಜಿಲ್ಲಾ ಕಾಂಗ್ರೆಸ್ ಪ. ಜಾ. ವಿಭಾಗದ ಪದಗ್ರಹಣ ಸಮಾರಂಭದಲ್ಲಿ ಮಹೇಶ್ ರವರು ಕೆ.ಪಿ.ಸಿ.ಸಿ. ಪ. ಜಾ. ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಆದೇಶ ಪತ್ರವನ್ನು ಪಡೆದಿರುತ್ತಾರೆ.
ಮಹೇಶ್ ಬೆಳ್ಳಾರ್ಕರ್ ರವರು ಸುಳ್ಯದ ಮಾಜಿ ಶಾಸಕ ಕೆ. ಕುಶಲರ ಪುತ್ರರಾಗಿದ್ದಾರೆ.
