
ಗುತ್ತಿಗಾರು ಗ್ರಾಮದ ಬಳ್ಳಕ್ಕ ಹೆಬ್ಬಾರ ಮನೆಯ ತರವಾಡು ಮನೆಯ ಗೃಹಪ್ರವೇಶ ಹಾಗೂ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಗಳ ನೇತೃತ್ವದಲ್ಲಿ ಫೆ.19, 20 ಮತ್ತು 21 ರಂದು ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ : ಫೆ.19 ಬುಧವಾರ ರಾತ್ರಿ ಗಂಟೆ 7-00ರಿಂದ ಪ್ರಾರ್ಥನೆ, ಸುದರ್ಶನ ಹೋಮ ನಡೆಯಲಿದೆ. ಫೆ. 20 ಗುರುವಾರ ಸಂಜೆ ತಂತ್ರಿಗಳ ಆಗಮನ, ಸಂಜೆ ಗಂಟೆ 6-00ರಿಂದ ಪುಣ್ಯಾಹವಾಚನ, ಸ್ಥಳಶುದ್ದಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ನಡೆಯಲಿದೆ.
ಫೆ. 21 ಶುಕ್ರವಾರದಂದು ಬೆಳಿಗ್ಗೆ ಗಂಟೆ 7-00ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ,ಗೃಹಪ್ರವೇಶ ಮತ್ತು ಮಧ್ಯಾಹ್ನ ಗಂಟೆ 12-01ರ ವೃಷಭ ಲಗ್ನದ ಸುಮುಹೂರ್ತದಲ್ಲಿ
ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳಾದ ಪಿಲಿಚಾಮುಂಡಿ, ಪುರುಷ ದೈವ, ವರ್ಣಾರ ಪಂಜುರ್ಲಿ, ಸತ್ಯದೇವತೆ, ಶಿರಾಡಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತ್ತಿ, ರಾಹುಗುಳಿಗ, ಗುಳಿಗ ದೈವದ ಬ್ರಹ್ಮಕಲಶಾಭಿಷೇಕ, ಕಲಶಾಭಿಷೇಕ,ಮಹಾಪೂಜೆ, ಮಂಗಳಾರತಿ, ನಿತ್ಯನೈಮಿತ್ಯಗಳ ನಿರ್ಣಯ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
