
ಭಾರತೀಯ ರಬ್ಬರ್ ಮಂಡಳಿ ವತಿಯಿಂದ ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಸಹಯೋಗದಲ್ಲಿ ಸೀತಾರಾಮ ಗೌಡ ಪಿಂಡಿಮನೆ ಮತ್ತು ನಾರಾಯಣ ಗೌಡ ಪಿಂಡಿಮನೆ ಇವರ ರಬ್ಬರ್ ತೋಟಗಳಲ್ಲಿ ನಡೆಯುತ್ತಿರುವ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರವನ್ನು ನಿವೃತ್ತ ಮುಖ್ಯೊಪಾಧ್ಯಯರು ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಹೊನ್ನಪ್ಪ ಮಾಸ್ಟರ್ ಅಡ್ತಲೆ ಇವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿ ಪುತ್ತೂರಿನ ಉಪ ಅಭಿವೃದ್ಧಿ ಅಧಿಕಾರಿ ಶ್ರೀಮತಿ ದೀಪ್ತಿ. ಸಿ. ವಿ., ಸುಳ್ಯದ ರಬ್ಬರ್ ಕ್ಷೇತ್ರಾಭಿವೃದ್ಧಿ ಅಧಿಕಾರಿ ಶ್ರೀ ನಾಗಾರ್ಜುನ, ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಶಶಿಕುಮಾರ್ ಉಳುವಾರು ಭಾಗವಹಿಸಿದ್ದರು. ಸಂಘದ ನಿರ್ದೇಶಕ ವೆಂಕಟ್ರಮಣ ಪೆತ್ತಾಜೆ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎಂಟು ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಹದಿನೈದು ಮಂದಿ ಶಿಬಿರಾರ್ಥಿಗಳು ವೈಜ್ಞಾನಿಕವಾಗಿ ಟ್ಯಾಪಿಂಗ್ ಮಾಡುವ ರೀತಿಯನ್ನು ಅಭ್ಯಸಿಸುವುದರ ಜೊತೆಗೆ ಇಲಾಖೆಯ ಕಾರ್ಮಿಕ ಕಲ್ಯಾಣ ವಿಭಾಗದಿಂದ ಟ್ಯಾಪಿಂಗ್ ಕಾರ್ಮಿಕರಿಗೆ ದೊರೆಯುವ ಸವಲತ್ತುಗಳನ್ನು ಪಡೆಯುವುದರ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
