Ad Widget

ಮುರುಳ್ಯ ಶಾಲಾ ಮುಂಭಾಗದ ರಸ್ತೆಯಲ್ಲಿ ಹಂಪ್ ಅಳವಡಿಸುವಂತೆ  ಲೋಕೋಪಯೋಗಿ ಹಾಗೂ ಪೋಲಿಸ್ ಇಲಾಖೆಗೆ ಮನವಿ

ಮುರುಳ್ಯ ಶಾಂತಿನಗರ ಶಾಲಾ ಮುಂಭಾಗದಲ್ಲಿ ಹಾದು ಹೋಗುವ ಮಂಜೇಶ್ವರ ಪುತ್ತೂರು ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯು ಅಪಘಾತ ವಲಯ ಪ್ರದೇಶವಾಗಿದ್ದು ಹಲವಾರು ರಸ್ತೆ ಅಪಘಾತಗಳು ಸಂಭವಿಸಿವೆ. ಹಾಗೂ ಶಾಲೆಯು ಪಕ್ಕದಲ್ಲೇ ಇರುವುದರಿಂದ ಇಲ್ಲಿ ರಸ್ತೆಗೆ ಹಂಪ್ ಅಳವಡಿಸಿ ಸಂಭಾವ್ಯ ಅಪಾಯಗಳನ್ನು ತಡೆಹಿಡಿಯಲು ಶಾಲೆಯ ಮುಂಭಾಗದ ರಸ್ತೆಯ ಕನಿಷ್ಠ 50 ಮೀಟರ್ ಅಂತರದಲ್ಲಿ ಎರಡು ಕಡೆ ಹಂಪ್ ಗಳನ್ನು ನಿರ್ಮಿಸಬೇಕು,ಹಾಗೂ ವಾಹನ ಸವಾರರಿಗೆ ಹಂಪ್ ಕಾಣುವಂತೆ ಸೂಚನ ಫಲಕ ಅಥವಾ ರಿಫ್ಲೆಕ್ಟ್ ಪೈಂಟ್ ಕೊಡಬೇಕು ಇಲ್ಲದಿದ್ದಲ್ಲಿ ಹಂಪ್ ವಾಹನ ಸವಾರರಿಗೆ ಕಾಣದೆ ಅಪಘಾತ ಆಗಿ ಜೀವ ಹಾನಿ ಯಾಗುವ ಸಾಧ್ಯತೆಯು ಇರುತ್ತದೆ. ಹಾಗಾಗಿ ಈ ಬಗ್ಗೆ ತಾವು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಮುರುಳ್ಯ ಬ್ರಾಂಚ್ ಸಮಿತಿ ವತಿಯಿಂದ ಲೋಕೋಪಯೋಗಿ ಇಲಾಖೆ,ಸುಳ್ಯ ವೃತ್ತನಿರೀಕ್ಷಕರು ಹಾಗೂ ಬೆಳ್ಳಾರೆ ಪೋಲಿಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಎಸ್‌ಡಿಪಿಐ ಮುರುಳ್ಯ ಬ್ರಾಂಚ್ ಸಮಿತಿ ಅಧ್ಯಕ್ಷ ಮುಹಮ್ಮದ್ ಬಶೀರ್, ಕಾರ್ಯಕರ್ತರಾದ ಹನೀಫ್ ಹಾಗೂ ಸುಫೈಲ್ ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!