Ad Widget

ಗುತ್ತಿಗಾರು : ಲಯನ್ಸ್ ಕ್ಲಬ್ ಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ

ಅಮರ ಸುದ್ದಿ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಸೇರಿದಂತೆ ಮೂವರು ಸಾಧಕರಿಗೆ ಸನ್ಮಾನ

. . . . . . . . .

ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಲಯನ್ಸ್ ಕ್ಲಬ್ ವಲಯಾಧ್ಯಕ್ಷರಾದ ಲ| ರೂಪಾಶ್ರೀ.ಜೆ ರೈ ಹಾಗೂ ಜಯಂತ್ ರೈ ರವರ ಅಧಿಕೃತ ಭೇಟಿ ಕಾರ್ಯಕ್ರಮವು ಫೆ.16 ರಂದು ಗುತ್ತಿಗಾರಿನ ಲಯನ್ಸ್ ಸಭಾಭವನದಲ್ಲಿ ನಡೆಯಿತು.
ಲ| ರೂಪಾಶ್ರೀ.ಜೆ ರೈ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸರೋಜಿನಿ ಗಂಗಯ್ಯ ರವರು ವಲಯಾಧ್ಯಕ್ಷರ ಪರಿಚಯವನ್ನು ನೆರವೇರಿಸಿದರು. ಹಾಗೂ ವಲಯಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುತ್ತಿಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ| ಕುಶಾಲಪ್ಪ ತುಂಬತ್ತಾಜೆ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅಮರ ಸುದ್ದಿ ವಾರಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ, ಸಾಹಿತಿ ಹಾಗೂ ರಂಗ ನಿರ್ದೇಶಕರಾದ ಯೋಗೀಶ್ ಹೊಸೊಳಿಕೆ ಹಾಗೂ ಹೈ ಜಂಪ್ ನಲ್ಲಿ ರಾಜ್ಯಮಟ್ಟಕ್ಕೆ ತಲುಪಿದ ವಿವೇಕ್ ಎರ್ದಡ್ಕ ಇವರುಗಳನ್ನು ಸನ್ಮಾನಿಸಲಾಯಿತು.
ಗುತ್ತಿಗಾರು ಲಯನ್ಸ್ ಕ್ಲಬ್ ಕಾರ್ಯದರ್ಶಿ ವೆಂಕಪ್ಪ ಕೇನಾಜೆ ವಾರ್ಷಿಕ ವರದಿ ವಾಚನ ಮಾಡಿದರು. ನಂತರ ವಿಕಲಚೇತನ ಮಹಿಳೆ ಮೀನಾಕ್ಷಿ ನಡುಗಲ್ಲು ರವರಿಗೆ ಧನಸಹಾಯ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗುತ್ತಿಗಾರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ| ವೆಂಕಪ್ಪ ಕೇನಾಜೆ, ಕೋಶಾಧಿಕಾರಿ ಲ| ಪುರುಷೋತ್ತಮ ಮಣಿಯಾನ ಹಾಗೂ ಲ| ಜಯರಾಮ್ ಕಡ್ಲಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗುತ್ತಿಗಾರು ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಭಾಗಗಳ ಲಯನ್ಸ್ ಕ್ಲಬ್ ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಲ| ಕುಶಾಲಪ್ಪ ತುಂಬತ್ತಾಜೆ ರವರು ಸ್ವಾಗತಿಸಿ ಲ| ಮಣಿಯಾನ ಪುರುಷೋತ್ತಮ ಧನ್ಯವಾದ ಸಮರ್ಪಿಸಿದರು. ವೆಂಕಟ್ರಮಣ ಕೆಂಬ್ರೋಳಿ ಕಾರ್ಯಕ್ರಮ ನಿರೂಪಣೆ ಮಾಡಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading