
ಮರ್ಕಂಜ ಗ್ರಾಮದ ಹಲ್ದಡ್ಕ ನಾರ್ಣಪ್ಪ ಗೌಡ ಎಂಬವರು ನಿನ್ನೆ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ತಾರಾವತಿ, ಪುತ್ರರಾದ ಮಿಲನ್, ಮಿಥುನ್, ಸಹೋದರರಾದ ಮಾಧವ ಗೌಡ ಹಲ್ದಡ್ಕ, ಪುರುಷೋತ್ತಮ ಗೌಡ ಹಲ್ದಡ್ಕ, ಓರ್ವ ಸಹೋದರಿ, ಸೊಸೆ ರಮ್ಯ, ಮೊಮ್ಮಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
