- Thursday
- February 20th, 2025

ಮರ್ಕಂಜ ಗ್ರಾಮದ ಹಲ್ದಡ್ಕ ನಾರ್ಣಪ್ಪ ಗೌಡ ಎಂಬವರು ನಿನ್ನೆ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಾರಾವತಿ, ಪುತ್ರರಾದ ಮಿಲನ್, ಮಿಥುನ್, ಸಹೋದರರಾದ ಮಾಧವ ಗೌಡ ಹಲ್ದಡ್ಕ, ಪುರುಷೋತ್ತಮ ಗೌಡ ಹಲ್ದಡ್ಕ, ಓರ್ವ ಸಹೋದರಿ, ಸೊಸೆ ರಮ್ಯ, ಮೊಮ್ಮಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅಮರ ಸುದ್ದಿ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಸೇರಿದಂತೆ ಮೂವರು ಸಾಧಕರಿಗೆ ಸನ್ಮಾನ ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಲಯನ್ಸ್ ಕ್ಲಬ್ ವಲಯಾಧ್ಯಕ್ಷರಾದ ಲ| ರೂಪಾಶ್ರೀ.ಜೆ ರೈ ಹಾಗೂ ಜಯಂತ್ ರೈ ರವರ ಅಧಿಕೃತ ಭೇಟಿ ಕಾರ್ಯಕ್ರಮವು ಫೆ.16 ರಂದು ಗುತ್ತಿಗಾರಿನ ಲಯನ್ಸ್ ಸಭಾಭವನದಲ್ಲಿ ನಡೆಯಿತು.ಲ| ರೂಪಾಶ್ರೀ.ಜೆ ರೈ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸರೋಜಿನಿ ಗಂಗಯ್ಯ...

ಮನೆಯಲ್ಲಿ ಕೆಲಸ ಮಾಡುವ ವೇಳೆ ಆಯತಪ್ಪಿ ಬಿದ್ದು ಕಾಲು ಮುರಿತಗೊಂಡು ಮನೆಯಲ್ಲಿ ಕಷ್ಟ ಪಡುತ್ತಿರುವ ಲೀಲಾವತಿ ಬೆದ್ರಕಾಡು ರವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಆರಂತೋಡು ಘಟಕದ ವತಿಯಿಂದ 30 ಕೆಜಿ ಅಕ್ಕಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಆರಂತೋಡು ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ, ಕಾರ್ಯದರ್ಶಿ ರಾಮಕೃಷ್ಣ ಆರಮನೆಗಯ ಅಂಬೆಡ್ಕರ್ ರಕ್ಷಣಾ ವೇದಿಕೆಯ ಉಪಾಧ್ಯಕ್ಷರು,ತಾಲೂಕು ಕಾರ್ಯದರ್ಶಿ, ವೇದಿಕೆಯ...

ಸುಳ್ಯ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ ರಾಧಾಕೃಷ್ಣ ಬೊಳ್ಳೂರು ರವರನ್ನು ಕೆಪಿಸಿಸಿ ಸಂಯೋಜಕ ಎಸ್ ಸಂಶುದ್ದಿನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸುಳ್ಯ ತಾಲೂಕು ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆಯವರು...

ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪೆರಿಯ ಕಲ್ಯೊಟ್ ನಲ್ಲಿ ಕೃಪೆಶ್ ಮತ್ತು ಸಜಿತ್ಲಾಲ್ ಅವರ 6 ನೇ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ಅವರ ಕನ್ನಡ ಭಾಷಣವನ್ನು ಮಲಯಾಳಂ ಭಾಷೆಗೆ ತರ್ಜುಮೆ ಮಾಡಲು ಅವರ ವಾಹನದ ಬೆಂಗಾವಲು ವಾಹನದ ಜೊತೆಯಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಾಸರಗೋಡು ನಗರದ ಟ್ರಾಫಿಕ್ ಸಿಗ್ನಲ್ ನಲ್ಲಿ...

.ಆರಂತೋಡು ಗ್ರಾಮ ಪಂಚಾಯಿತ್ ನ ದ್ವಿತೀಯ ಹಂತದ 2024-25ನೇ ಸಾಲಿನ ಗ್ರಾಮ ಸಭೆಯು ಆರಂತೋಡು ಗ್ರಾಮ ಪಂಚಾಯತ್ ನ "ಅಮೃತ ಸಭಾಂಗಣ"ದಲ್ಲಿ ಫೆ. 17 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ನಡೆಯುತು. ಸಭೆಯ ನೋಡಲ್ ಅಧಿಕಾರಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀಮತಿ ಗೀತಾ ಭಾಗವಹಿಸಿದ್ದರು. ಗ್ರಾಮ ಸಭೆಯಲ್ಲಿ ಮುಖ್ಯ...

ಜೇಸಿಐ ಬೆಳ್ಳಾರೆ, ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ, ಗ್ರಾಮ ಪಂಚಾಯತ್ ಬೆಳ್ಳಾರೆ ಮತ್ತು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಬೆಳ್ಳಾರೆ ವಲಯದ ವತಿಯಿಂದ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ದೇವರ ಪೇಟೆ ಸವಾರಿಯ ದಿನ ಪೇಟೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಜೇಸಿಐ ಸದಸ್ಯರು, ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು,...

ಜೇಸಿಐ ಬೆಳ್ಳಾರೆ ವತಿಯಿಂದ ಜಾತ್ರೋತ್ಸವಗಳಲ್ಲಿ ಆನ್ನ ಮತ್ತು ನೀರಿನ ಮಹತ್ವ ತಿಳಿಸುವ ಜಾಗೃತಿ ಫಲಕ ಅನಾವರಣ ಕಾರ್ಯಕ್ರಮ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಜಾಗೃತಿ ಫಲಕ ಅನಾವರಣಗೊಳಿಸಿದರು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು, ಪೂರ್ವಧ್ಯಕ್ಷರುಗಳಾದ ಕೇಶವಮೂರ್ತಿ ಕಾವಿನಮೂಲೆ, ಪದ್ಮನಾಭ...
ಮುರುಳ್ಯ ಶಾಂತಿನಗರ ಶಾಲಾ ಮುಂಭಾಗದಲ್ಲಿ ಹಾದು ಹೋಗುವ ಮಂಜೇಶ್ವರ ಪುತ್ತೂರು ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯು ಅಪಘಾತ ವಲಯ ಪ್ರದೇಶವಾಗಿದ್ದು ಹಲವಾರು ರಸ್ತೆ ಅಪಘಾತಗಳು ಸಂಭವಿಸಿವೆ. ಹಾಗೂ ಶಾಲೆಯು ಪಕ್ಕದಲ್ಲೇ ಇರುವುದರಿಂದ ಇಲ್ಲಿ ರಸ್ತೆಗೆ ಹಂಪ್ ಅಳವಡಿಸಿ ಸಂಭಾವ್ಯ ಅಪಾಯಗಳನ್ನು ತಡೆಹಿಡಿಯಲು ಶಾಲೆಯ ಮುಂಭಾಗದ ರಸ್ತೆಯ ಕನಿಷ್ಠ 50 ಮೀಟರ್ ಅಂತರದಲ್ಲಿ ಎರಡು ಕಡೆ ಹಂಪ್...

ಸುಳ್ಯ ತಾಲೂಕು ಕೃಷಿಕ ಸಮಾಜದ ಮೊದಲ ಸಭೆಯು ಫೆ.17 ರಂದು ಕೃಷಿ ಇಲಾಖೆ ಸಭಾಂಗಣದಲ್ಲಿ ನಡೆಯಿತು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಕುಸುಮಾಧರ. ಎ. ಟಿ. ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾದ ಚಂದ್ರ ಕೋಲ್ಚಾರ್, ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ಯಾಪ್ರಸಾದ್ ಅಡ್ಡಂತಡ್ಕ, ಕೋಶಾಧಿಕಾರಿ ಸವಿನ್ ಕೊಡಪಾಲ, ಕೃಷಿ ಇಲಾಖೆ...

All posts loaded
No more posts