
ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಪದವೀಧರೇತರ ಶಾಲಾ ಮುಖ್ಯೋಪಾಧ್ಯಾಯರ ಸಂಘ (ರಿ ), ಬೆಂಗಳೂರು, ಸುಳ್ಯ ತಾಲೂಕು ಘಟಕದ ಪುನರ್ ರಚನಾ ಸಭೆ ಫೆಬ್ರವರಿ 15 ರಂದು ಸುಳ್ಯ ತಾಲೂಕು ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನಿಂಗರಾಜು.ಕೆ. ಪಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿ ಅಧ್ಯಕ್ಷ ದೇವರಾಜ್ ಎಸ್ .ಕೆ. ಉಪಸ್ಥಿತಿಯಲ್ಲಿ ನೂತನ ತಾಲೂಕು ಘಟಕದ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ನಿಂಗರಾಜು. ಕೆ.ಪಿ ಇವರು ನೂತನ ಪದಾಧಿಕಾರಿಗಳ ಜವಾಬ್ದಾರಿ ಮತ್ತು ಸಂಘದ ಆಶಯಗಳನ್ನು ತಿಳಿಯಪಡಿಸಿದರು. ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ .ಕೆ, ಸಂಘದ ಗೌರವಾಧ್ಯಕ್ಷ ಮಾಯಿಲಪ್ಪ. ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ನೂತನ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಬನ ಆಯ್ಕೆಯಾದರು. ಅಧ್ಯಕ್ಷರಾಗಿ ದೇವರಾಜ್ ಎಸ್ ಕೆ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಶ್ರೀಮತಿ ವಜ್ರಾಕ್ಷಿ, ಶ್ರೀಮತಿ ಸೀತಾ. ವಿ, ಕೋಶಾಧಿಕಾರಿಯಾಗಿ ಚಂದ್ರಶೇಖರ ಪಾರೆಪ್ಪಾಡಿ, ಕಾರ್ಯದರ್ಶಿಯಾಗಿ ಶ್ರೀಮತಿ ಸುನಂದ ಜಿ,ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಶಶಿಕಲಾ ಪೂಜಾರ್ತಿ, ಅರುಣಕುಮಾರ್.ಎಂ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ರೂಪವಾಣಿ. ಬಿ, ಮತ್ತು ಶ್ರೀಮತಿ ವೀಣಾ. ಕೆ, ಗೌರವ ಸಲಹೆಗಾರರಾಗಿ ಶ್ರೀಧರ ಗೌಡ ಕೆ, ಮಾಯಿಲಪ್ಪ. ಜಿ., ಶ್ರೀಮತಿ ವಿಜಯಲಕ್ಷ್ಮಿ ಬಿ ಆಯ್ಕೆಯಾದರು. ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಬನ ಸ್ವಾಗತಿಸಿ, ಅಧ್ಯಕ್ಷರಾದ ದೇವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಂದ್ರಶೇಖರ್ ಪಾರೆಪ್ಪಾ ಡಿ ವಂದಿಸಿದರು.
