
ಕರ್ನಾಟಕ ಘನ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಯವರು ಬಹು ಬೇಡಿಕೆಯ ಅರಂತೋಡು ಎಲಿಮಲೆ ರಸ್ತೆ ಯನ್ನು ವೀಕ್ಷಿಸಿ ಆರಂತೋಡಿನಿಂದ ಮರ್ಕಂಜದ ಸನಿಹವರೆಗೆ ಸುಮಾರು 8ಕಿ. ಮೀ ರಸ್ತೆ ಸ್ವತಃ ವೀಕ್ಷಿಸಿದರು. ಶೀಘ್ರದಲ್ಲಿ ರಸ್ತೆಯನ್ನು ಸಂಪೂರ್ಣ ಅಗಲೀಕರಣಗೊಳಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ, ಕಾಂಗ್ರೆಸ್ ಮುಖಂಡ ಟಿ. ಎಂ. ಶಾಹಿದ್ ಆರಂತೋಡು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಉಪಸ್ಥಿತರಿದ್ದರು.
