
ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಫೆ.15 ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆದ ಸಂಧ್ಯಾರಶ್ಮಿ ಸಾಹಿತ್ಯ ಸಂಘದ “ತಿಂಗಳ ಸಾಹಿತ್ಯ ಸಂವಾದ ಮಾಲಿಕೆ” ಕಾರ್ಯಕ್ರಮದಲ್ಲಿ “ಲೇಖಕಿ ಶ್ರೀಮತಿ ಲಲಿತಾಜ ಮಲ್ಲಾರ ರವರ ಸಾಹಿತ್ಯ ವಿಚಾರ ಮಂಡನೆ” ನಡೆಯಿತು.
ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಶ್ರೀಮತಿ ತಾರಾಮತಿ ಕಜ್ಜೋಡಿ ರವರು ಲಲಿತಾಜ ಮಲ್ಲಾರ ರವರ ವ್ಯಕ್ತಿತ್ವ ಪರಿಚಯ ಮಾಡಿದರು.
ಸಾಹಿತಿಗಳಾದ ಕುಮಾರಸ್ವಾಮಿ ತೆಕ್ಕುಂಜ ರವರು ಇತ್ತೀಚೆಗೆ ಬಿಡುಗಡೆಗೊಂಡ ಲಲಿತಾಜ ಮಲ್ಲಾರ ರವರ “ಕೋಟಿ ತೀರ್ಥ ಕೃತಿಯ” ಕೃತಿ ಪರಿಚಯವನ್ನು ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಹಾಗೂ ಲೇಖಕರಾದ ಶ್ರೀಮತಿ ಲಲಿತಾಜ ಮಲ್ಲಾರ ರವರು ಉಪಸ್ಥಿತರಿದ್ದರು.
ಗೌರವ ಉಪಸ್ಥಿತರಾಗಿ ಸುಳ್ಯ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ| ಎಸ್.ರಂಗಯ್ಯ, ಸಾಹಿತಿಗಳಾದ ಕುಮಾರಸ್ವಾಮಿ ತೆಕ್ಕುಂಜ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಮತಿ ತಾರಾಮತಿ ಕಜ್ಜೋಡಿ ರವರು ಉಪಸ್ಥಿತರಿದ್ದರು.
ಬಾಬು ಗೌಡ ಅಚ್ರಪ್ಪಾಡಿ ರವರು ಸ್ವಾಗತಿಸಿ ಚಂದ್ರಾವತಿ ಬಡ್ಡಡ್ಕ ರವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ರೂಪವಾಣಿ.ಬಿ ಕಾರ್ಯಕ್ರಮ ನಿರೂಪಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)
