
ಮನೆಯಲ್ಲಿ ಕೆಲಸ ಮಾಡುವ ವೇಳೆ ಆಯತಪ್ಪಿ ಬಿದ್ದು ಕಾಲು ಮುರಿತಗೊಂಡು ಮನೆಯಲ್ಲಿ ಕಷ್ಟ ಪಡುತ್ತಿರುವ ಅರಂತೋಡು ಗ್ರಾಮದ ಲೀಲಾವತಿ ಬೆದ್ರಕಾಡು ರವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಆರಂತೋಡು ಘಟಕದ ವತಿಯಿಂದ 30 ಕೆಜಿ ಅಕ್ಕಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆರಂತೋಡು ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ, ಕಾರ್ಯದರ್ಶಿ ರಾಮಕೃಷ್ಣ ಆರಮನೆಗಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ಉಪಾಧ್ಯಕ್ಷರು,ತಾಲೂಕು ಕಾರ್ಯದರ್ಶಿ, ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
