- Thursday
- February 20th, 2025

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ಅವರನ್ನು ಕೆಪಿಸಿಸಿ ಆಯ್ಕೆ ಮಾಡಿದೆ. ತಾ.ಪಂ.ಮಾಜಿ ಸದಸ್ಯರಾಗಿ,ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಅಮರ ಮುಡ್ನೂರು ಗ್ರಾ.ಪಂ.ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಹಲವು ಸಹಕಾರ ಸಂಘಗಳಿಗೆ ಚುನಾವಣೆ ನಡೆಯುತ್ತಿದ್ದು ಸಹಕಾರಿಗಳಿಗೆ ಚುನಾವಣಾ ಪರ್ವವಾಗಿದೆ. ಚುನಾವಣೆ ಎಂದ ಕೂಡಲೇ ಸಾಂಪ್ರದಾಯಿಕ ಶೈಲಿಯಲ್ಲಿ ಮನೆ ಮನೆ ಭೇಟಿ ಯ ಮತಪ್ರಚಾರ ಮಾಡುವುದು ಸಾಮಾನ್ಯವಾದರೇ ಬಿಳಿನೆಲೆ ಯ ರೈತಾಪಿ ಸಹಕಾರಿ ಅಭಿವೃದ್ಧಿ ರಂಗ ಚುನಾವಣೆಗೆ ಅಧುನಿಕ ತಂತ್ರಗಾರಿಕೆಯ ಸ್ಪರ್ಷ ನೀಡಿದೆ. ತಂತ್ರಜ್ಞಾನ ಬಳಸಿಕೊಂಡು ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು ಗ್ರಾಮಾಂತರದಲ್ಲಿ ಹೊಸತನವನ್ನು ಪರಿಚಯಿಸಿದ್ದಾರೆ. ಸಹಕಾರ...

ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಮಂಗಳೂರು ಇದರ ಸಭೆ ಮುಂದೂಡಿಕೆಯಾಗಿದ್ದು, ಫೆ 18 ರಂದು ಕೃಷಿಕ ಸಮಾಜದ ಅಧ್ಯಕ್ಷರಾದ ವಿಜಯ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿ ಅಗತ್ಯ ಸಲಹೆಗಳನ್ನು ನೀಡುವಂತೆ ಹಾಗೂ ಜಿಲ್ಲೆಯ ಕೃಷಿ ಚಟುವಟಿಕೆ...

ಕನಕಮಜಲು ಗ್ರಾಮದ ಬುಡ್ಲೆಗುತ್ತು ದಿ. ಕೆ.ಬಿ. ಸಂಕಪ್ಪ ಗೌಡರ ಪುತ್ರ ಜಗದೀಶ್ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.14ರಂದು ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಜಗದೀಶ್ ಅವರು ಕಳೆದ 50 ವರ್ಷದಿಂದ ಮೈಸೂರಿನಲ್ಲಿ ರೂಪಕಲಾ ಡಿಸೈನ್ ಸಂಸ್ಥೆ ನಡೆಸುತ್ತಿದ್ದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಿಜಯ, ಪುತ್ರ ಯಶಸ್, ಸಹೋದರರಾದ ಜಯರಾಮ ಗೌಡ, ರಾಮಚಂದ್ರ ಗೌಡ,...

ಸೈನಿಕರ ಹುತಾತ್ಮ ದಿನದ ಅಂಗವಾಗಿ ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಕರಾಳ ದಿನ ವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸೈನಿಕರ ಫೋಟೋಗಳಿಗೆ ಮೊಂಬತ್ತಿಯನ್ನು ಉರಿಸಿ ಸೈನಿಕರನ್ನು ಸ್ಮರಿಸಿ, ಹುತಾತ್ಮ ಸೈನಿಕರಿಗೆ ಭಾವಪೂರ್ವಕ ಗೌರವ ನಮನ ಸಲ್ಲಿಸಿದರು. ಮತ್ತು ಸೈನಿಕರ ನೆನಪಿನ ಗೌರವದ ಸಲುವಾಗಿ ದೇಶದ ಸೈನಿಕ ವಲಯಕ್ಕೆ ಗೌರವಿಸುವ ಪತ್ರವನ್ನು ಬರೆದು ರವಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ...

ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಸಂಧ್ಯಾರಶ್ಮಿ ಸಾಹಿತ್ಯ ಸಂಘದ “ತಿಂಗಳ ಸಾಹಿತ್ಯ ಸಂವಾದ ಮಾಲಿಕೆ ಕಾರ್ಯಕ್ರಮ” ವು ಫೆ.15 ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಲಿದ್ದು, ಲೇಖಕರಾದ ಶ್ರೀಮತಿ ಲಲಿತಾಜ ಮಲ್ಲಾರ ರವರ ಸಾಹಿತ್ಯದ ಕುರಿತು ಲೇಖಕರಾದ ಕುಮಾರಸ್ವಾಮಿ...

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗುತ್ತಿಗಾರು ಗ್ರಾಮ ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಪ್ರವೇಶ ಪರೀಕ್ಷಾ ತರಬೇತಿ ಶಿಬಿರವು ನಡೆದಿದ್ದು, ಇಲ್ಲಿ ತರಬೇತಿ ಪಡೆದು ಪರೀಕ್ಷೆ ಬರೆದು ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಗುತ್ತಿಗಾರು ಗ್ರಂಥಾಲಯದಲ್ಲಿ ಗುತ್ತಿಗಾರಿನ...