
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 13-02-2025 ರಂದು ಅಗದ ತಂತ್ರ ಮತ್ತು ಸ್ವಸ್ಥ ವೃತ್ತ ವಿಭಾಗ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಭಾಗಿತ್ವದಲ್ಲಿ ದಿನಾಂಕ 04/02/2025 ರಂದು ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರೆಸೆಂಟೇಶನ್ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಹಾಗೂ ವಿದ್ಯಾರ್ಥಿಗಳು ಬೀದಿ ನಾಟಕವನ್ನು ಪ್ರದರ್ಶಿಸಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಡಾ.ಲೀಲಾಧರ್ ಡಿ ವಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಡಾ. ಹರ್ಷಿತ ಎಂ, ಎನ್ಎಸ್ಎಸ್ ಯೋಜನಾಧಿಕಾರಿಯಾದ ಡಾ.ಪ್ರಮೋದ.ಪಿ.ಎ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್ಎಸ್ಎಸ್ ವಿದ್ಯಾರ್ಥಿಯಾದ ವೈಶಾಲಿ, ಪ್ರಸನ್ನ ಬಿ ಎಸ್,ರಾಹುಲ್ ರಾಜನ್ ಹಾಗು ದೀಪ್ತಿ ಧರ್ಮರಾಜ್ ಪ್ರಾರ್ಥಿಸಿ, ನಿಸರ್ಗ.ಟಿ ಸ್ವಾಗತಿಸಿ, ಸಾವನ್ ಮ್ಯಾಥ್ಯೂ ವಂದಿಸಿ, ಹನುಮಂತ ಉತ್ತುರ್ ಹಾಗು ಜ್ಯೋತಿ ಭಟ್ ನಿರೂಪಿಸಿದರು.
