
ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಫೆ.11 ರಂದು ವಾರ್ಷಿಕ ನೇಮೋತ್ಸವ ನಡೆಯಿತು.
ಬೆಳಿಗ್ಗೆ ಗಣಹೋಮ, ಭಂಡಾರ ಹೊರಡುವುದು, ಶಿವಪೂಜೆ, ಬ್ರಹ್ಮರಾಕ್ಷಸ ಪೂಜೆ, ಕಲಶಪೂಜೆ ಹಾಗೂ ಮದ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.
ಸಂಜೆ ದೀಪಾರಾಧನೆ, ದುರ್ಗಾಪೂಜೆ ಹಾಗೂ ರಾತ್ರಿ ಮಹಾತಂಬಿಲ ನಡೆದು ನಂತರ ವಿಘ್ನೇಶ್ ಉಬ್ರಾಳ ರವರ ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳ ಇವರಿಂದ “ಅಮರೇಂದ್ರ ಪದವಿಜಯಿ” ಎನ್ನುವ ಯಕ್ಷಗಾನ ಪ್ರಸಂಗ ನಡೆಯಿತು.
ನಂತರ ರಾತ್ರಿ ನೇಮೋತ್ಸವ ಹಾಗೂ ಮರುದಿವಸ ಫೆ.12 ರಂದು ಬೆಳಿಗ್ಗೆ ಸಂಪ್ರೋಕ್ಷಣೆ ನೆರವೇರಿತು.(ವರದಿ : ಉಲ್ಲಾಸ್ ಕಜ್ಜೋಡಿ)
