Ad Widget

ಕುಕ್ಕೆ ಕ್ಷೇತ್ರಕ್ಕೆ ಉಜ್ಜಯಿನಿ ನಾಥ ಸಂಪ್ರದಾಯದ ಸ್ವಾಮೀಜಿ ಭೇಟಿ.

ಸುಬ್ರಹ್ಮಣ್ಯ ಫೆ.11: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಖಿಲ ಭಾರತೀಯ ನಾಥ ಸಂಪ್ರದಾಯದ ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಶ್ರೀ ಶ್ರೀ 1008 ಮಹಾಂತ ಯೋಗಿ ಪೀರ್ ರಮನಾಥ್ ಜಿ ಮಹಾರಾಜ್ ಸ್ವಾಮೀಜಿಯವರು ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ ಇಂದು ಮಂಗಳವಾರ ಕುಕ್ಕೆ ಕ್ಷೇತ್ರಕ್ಕೆ ತಮ್ಮ ಅನುಯಾಯಿಗಳೊಂದಿಗೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಶ್ರೀ ದೇವಳದ ವತಿಯಿಂದ ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ತುಳಸಿ ಹಾರ ಹಾಕಿ ಸ್ವಾಮೀಜಿಯವರನ್ನು ಗೌರವಿಸಿದರು. ಶ್ರೀ ದೇವಳಕ್ಕೆ ಭೇಟಿ ನೀಡಿದ ಸ್ವಾಮೀಜಿಯವರು ದೇವರ ದರ್ಶನವನ್ನು ಮಾಡಿದರು ತದನಂತರ ಮುಖ್ಯ ಅರ್ಚಕರಾದ ಸೀತಾರಾಮ ಎಡಪಡಿತಾಯ ಅವರು ದೇವರ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ದೇವಳದ ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಸ್ಥಳೀಯರಾದ ಶ್ರೀ ಕುಮಾರ ಬಿಲದ್ವಾರ ಮತ್ತಿತರರು ಹಾಜರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!