
ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ. ಈ ಸಮಿತಿಯ ಸದಸ್ಯರ ಸಭೆ ಫೆ. 12 ರಂದು ದೇವಸ್ಥಾನದ ಸಭಾಭವನದಲ್ಲಿ ನಡೆದು ನೂತನ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹರಿಪ್ರಕಾಶ್ ಅಡ್ಕಾರು ಅವರು ಅವಿರೋಧವಾಗಿ ಆಯ್ಕೆಯಾದರು.
ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರುಗಳಾದ ಶ್ರೀ ಕ್ಷೇತ್ರದ ಪ್ರದಾನ ಅರ್ಚಕ ಶ್ರೀವರ ಪಾಂಗಣ್ಣಾಯ, ಪುರುಷೋತ್ತಮ ಗೌಡ ನಂಗಾರು, ವಿನೋದ್ ಕುಮಾರ್ ಮಹಾಬಲಡ್ಕ, ಹೇಮಚಂದ್ರ ಕುತ್ಯಾಳ, ವಿಜಯಕುಮಾರ್ ನರಿಯೂರು, ಶ್ರೀಮತಿ ಸೌಮ್ಯಲಕ್ಷ್ಮಿ ರವಿಶಂಕರ್ ಬೈತಡ್ಕ, ಶ್ರೀಮತಿ ಸುಮತಿ ದಿವಾಕರ ಹುಲಿಮನೆ, ಶ್ರೀಮತಿ ಪವಿತ್ರ ಭಾರತಿ ಐತ್ತಪ್ಪ ನಾಯ್ಕ ಕೋನಡ್ಕಪದವು ಸಭೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಅಜ್ಜಾವರ ಪಿಡಿಓ ಜಯಮಾಲ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕೇಸರ ಗುರುರಾಜ್ ಭಟ್ ಅಡ್ಕಾರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ರೈ ಕುಕ್ಕಂದೂರು, ಉತ್ಸವ ಸಮಿತಿ ಕೋಶಾಧಿಕಾರಿ ವಿಜಯಕುಮಾರ್ ಕೋಡ್ತಿಲು, ಪ್ರಧಾನ ಕಾರ್ಯದರ್ಶಿ ಗೋಪಾಲ ವಿ. ಪದವು, ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಪ್ರದಾನ ಕಾರ್ಯದರ್ಶಿ ಭಾಸ್ಕರ ಅಡ್ಕಾರು ಬೀರಮಂಗಲ, ಜಾಲ್ಲೂರು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಬೋಜಪ್ಪ ನಾಯ್ಕ ವಿನೋಬನಗರ, ಚೆನ್ನಕೇಶವ ಜಾಲ್ಸೂರು, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲ ಕಾನ ಅಡ್ಕಾರು ಉಪಸ್ಥಿತರಿದ್ದರು.
