
ಕಾರ್ಗತ್ತಲ ನಿಶ್ಶಬ್ಧದ ರಾತ್ರಿಯಲ್ಲೂ ಅದೆಷ್ಟೋ ಶಬ್ಧಗಳಿರುತ್ತವೆ, ಕಿವಿಗೊಟ್ಟು ಆಲಿಸಿದರೆ ಮಾತ್ರ ಅವು ನಮ್ಮ ಗಮನಕ್ಕೆ ಬರುತ್ತವೆ…
ಒಬ್ಬಂಟಿಯಾಗಿ ನಾವು ಆ ಶಬ್ಧಗಳನ್ನು ಆಲಿಸಿದಾಗ ನಮ್ಮ ಒಳಮನಸೇಕೋ ಅಂಜುತ್ತದೆ, ಅಳುಕುತ್ತದೆ, ಭಯದಿಂದ ಬೆವರುತ್ತದೆ, ಮನದೊಳಗೆ ಭಯಪೂರಿತ ವಾತಾವರಣ ಸೃಷ್ಟಿಯಾಗುತ್ತದೆ…
ಆದರೆ ಭಯವನ್ನು ಹುಟ್ಟಿಸುವಂತಹ ಭಯಾನಕ ಶಬ್ದಗಳೇನೂ ಅಲ್ಲವದು, ಪ್ರತಿದಿನವೂ ಪ್ರಕೃತಿಯಲ್ಲಿ ಕೇಳಿಸುವ ಮಾಮೂಲಿ ಶಬ್ದಗಳೇ ರಾತ್ರಿಯ ನಿಶ್ಶಬ್ಧದಲ್ಲಿ ಕೊಂಚ ಜೋರಾಗಿ ಕೇಳಿಸಿ ನಮ್ಮ ಮನದಲ್ಲಿ ಭಯವನ್ನು ಹುಟ್ಟಿಸುವುದು, ಆದರೆ ಆ ಭಯದ ಮಧ್ಯೆಯೂ ಅಲ್ಲೊಂದು ಶಾಂತತೆಯ ವಾತಾವರಣವಿರುವುದು, ಆ ವಾತಾವರಣದಲ್ಲಿನ ಶಾಂತತೆಯನ್ನು ನಾವು ಅರಿತುಕೊಂಡು ಅನುಭವಿಸಿದಾಗ ನಮ್ಮ ಮನದೊಳಗಿನ ನೂರಾರು ಪ್ರಶ್ನೆಗಳಿಗೆ ಆ ಶಾಂತತೆಯೇ ಉತ್ತರವನ್ನು ನೀಡುವುದು, ಮನಸ್ಸಿಗೆ ನೆಮ್ಮದಿಯನ್ನು ತರುವುದು…✍️ಉಲ್ಲಾಸ್ ಕಜ್ಜೋಡಿ
