
ಜೀವನದಿಯಾಗಿರುವ ಪಯಸ್ವಿನಿ ಸುಳ್ಯದ ನಗರ ಹಾಗೂ ಅಜ್ಜಾವರ ಗ್ರಾಮದಲ್ಲಿನ ಜನರ ಕುಡಿಯುವ ನೀರಿಗೆ ವಿಷಪ್ರಾಶನವಾಗಿದ್ದು ಇದೀಗ ಮೀನು ಸೇರಿದಂತೆ ಹಲವು ಜಲಚರಗಳ ಮಾರಣಹೋಮವೇ ನಡೆದು ಹೋಗಿದೆ.
ಫೆ.9ರಂದು ಸುಳ್ಯದ ಪಯಸ್ವಿನಿ ನದಿಯ ನಾಗಪಟ್ಟಣ, ಭಸ್ಮಡ್ಕ ವ್ಯಾಪ್ತಿಯಲ್ಲಿ ಸಾವಿರಾರು ಮೀನುಗಳು ಸಾವಿಗೀಡಾಗಿದ್ದು, ದಿ.10 ರಂದು ಮುಂಜಾನೆ ಮತ್ತೆ ಕಾಂತಮಂಗಲ ದಲ್ಲಿಯೂ ಮೀನುಗಳು ಸತ್ತು ತೇಲಲಾರಂಭಿಸಿದವು. ನದಿ ನೀರಿನಲ್ಲಿ ಮೀನುಗಳು ತೇಲುತ್ತಾ ಹೋಗುತ್ತಿರುವುದನ್ನು ಸಾರ್ವಜನಿಕರು ಕಾಂತಮಂಗಲ ಸೇತುವೆಯ ಮೇಲೆ ನಿಂತು ವೀಕ್ಷಿಸಿ ಚಿತ್ರಿಸಿದಲ್ಲದೇ ಒಂದೆಡೆ ಸತ್ತ ಮೀನುಗಳನ್ನು ಹಲವಾರು ಜನ ಬಂದು ಮೀನುಗಳನ್ನು ಹೆಕ್ಕಿ ಕೊಂಡ್ಡೋಯ್ಯುವ ದೃಶ್ಯಗಳು ಕಾಣಿಸುತ್ತಿದ್ದವು. ಇದರ ಕುರಿತಾಗಿ ಪಯಸ್ವಿನಿ ಯುವಕ ಮಂಡಲ ಕೇರ್ಪಳದ ಸದಸ್ಯರು ನಗರ ಪಂಚಾಯತ್ ಗೆ ತೆರಳಿ ಜಲಚರಗಳ ರಕ್ಷಣೆ ನಡೆಸುವಂತೆ ಮನವಿಯನ್ನು ಸಲ್ಲಿಸಿದರು. ಇದೆಲ್ಲದರ ಬೆನ್ನಲ್ಲೆ ನಗರ ಪಂಚಾಯತ್ ಆಡಳಿತ ಎಚ್ಚೆತ್ತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫೆ.9 ಗೋಮಯ ಮಾದರಿಯಲ್ಲಿ ನೀರು ಇದ್ದವು ಇಂದು ತಿಳಿಯಾಗಿದೆ ಹಾಗೂ ಮೀನುಗಳು ಆಮ್ಲಜನಕ ಸಿಗದೇ ಸಾವು ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದರಲ್ಲದೇ ಕೆಎಫ್ ಡಿಸಿ ಗೂ ಇದರ ಬಗ್ಗೆ ಪ್ರಶ್ನಿಸಿದ್ದು ಯಾವುದು ವಿಷ ಅನಿಲಗಳು ಸೂರಿಕೆ ಆಗಿಲ್ಲಾ ಮತ್ತು ಇದೀಗ ನಾವು ನದಿಗೆ ಬಿಡುವುದಿಲ್ಲ ಎಂಬ ಮಾತುಗಳನ್ನು ಆಡಿದ್ದಾರೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ತಿಳಿಸಿದ್ದಾರೆ. ಇದರ ಮಧ್ಯೆ ನಗರ ಪಂಚಾಯತ್ ಮೂಲಗಳ ಪ್ರಕಾರ ಕೆಎಫ್ ಡಿ ಸಿ ಯ ವಿಷ ಅನಿಲದ ಪೈಪ್ ನಲ್ಲಿ ಸಣ್ಣದಾದ ರಂದ್ರದ ಮೂಲಕ ವಿಷ ಪೂರಿತ ನೀರು ನದಿಯನ್ನು ಸೇರಿ ಮೀನುಗಳು ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು ನ.ಪಂ ತನಿಖೆಯ ನಂತರವೇ ಇದರ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ.
