
ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನದ ಜಾತ್ರಾ ಮುಹೂರ್ತ ಅಂಗವಾಗಿ ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಶಂಖಚೂಡ ಕ್ಷೇತ್ರದಲ್ಲಿ ಫೆ.10 ರಂದು ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಆಡಳಿತ ಮೊಕ್ತೇಸರರಾದ ಕಾಳಿಕಾ ಪ್ರಸಾದ್ ಮುಂಡೋಡಿ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ, ಶಂಖಚೂಡ ಕ್ಷೇತ್ರದ ಅನುವಂಶೀಯ ಅಧ್ಯಕ್ಷರಾದ ಮಣಿಯಾನ ಪುರುಷೋತ್ತಮ, ಕುಶಾಲಪ್ಪ ಮಾಸ್ಟರ್ ರುದ್ರಚಾಮುಂಡಿ, ವೆಂಕಟ್ ವಳಲಂಬೆ, ಡಿ.ಆರ್.ಉದಯಕುಮಾರ್, ಕಿಶೋರ್ ಕುಮಾರ್ ಪೈಕ, ವೇಣುಕುಮಾರ್ ಚಿತ್ತಡ್ಕ , ಚಂದ್ರಶೇಖರ ಹೊಸೊಳಿಕೆ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
