
ಫೆ 08 ರಂದು ಕನಕಮಜಲಿನ ಸುಣ್ಣಮೂಲೆಯಲ್ಲಿ ಪಾದಾಚಾರಿಗಳ ಸಾವಿಗೆ ಕಾರಣವಾಗಿದ್ದ ವಾಹನ ಪತ್ತೆ ಹಚ್ಚುವಲ್ಲಿ ಪೋಲೀಸರು ಯಶಸ್ವಿಯಾಗಿದ್ದು ಇಂದು ಕಾರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಭೇದಿಸಲು ಪೋಲೀಸರು ವ್ಯಾಪಕ ತನಿಖೆ ಆರಂಭಿಸಿದ್ದರು. ಜಾಲ್ಸೂರಿನಿಂದ ಹಿಡಿದು ಸುಳ್ಯದ ತನಕ ಎಲ್ಲಾ ರಸ್ತೆ ಕಾಣುವ ಸಿಸಿ ಟಿವಿ ಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಒಂದು ಇಕೋ ಕಾರು ಸಂಶಯಾಸ್ಪದವಾಗಿ ಕಂಡು ಬಂದಿತ್ತೆನ್ನಲಾಗಿದೆ. ಆ ಕಾರಿನ ಬೆನ್ನು ಬಿದ್ದ ಪೋಲೀಸರಿಗೆ ಸುಳ್ಯದ ಜ್ಯೋತಿ ವೃತ್ತದ ಬಳಿಯಲ್ಲಿ ತಿರುವು ಪಡೆದು ತೆರಳಿದ್ದು ಕಂಡುಬಂದಿದೆ. ಇದರ ಜಾಡು ಹಿಡಿದು ಹೊರಟಾಗ ಕಾರು ಆರ್ ಕೆ ಭಟ್ ರವರ ಮನೆಯಲ್ಲಿ ಕಂಡು ಬಂದಿದೆ. ಫೆ. 09 ರಂದೇ ಪತ್ತೆ ಹಚ್ಚಿದ್ದರೂ ಮನೆಯಲ್ಲಿ ಯಾರು ಇಲ್ಲದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಕಾರನ್ನು ಸೀಝ್ ಮಾಡಲಾಗಿದೆ. ಚಾಲಕರಾಗಿ ಕಾರನ್ನು ಓಡಿಸಿದವರು ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದು ಇದೀಗ ಕಾರಿನ ಮಾಲಕರ ಮೇಲೆ ದೂರು ದಾಖಲು ಮಾಡಿ ತನಿಖೆ ಆರಂಭಿಸಲಾಗಿದೆ. ಕಾರು ಮಾಲಿಕ ಮತ್ತು ಮಗ ಮನೆಯಲ್ಲಿ ಇಲ್ಲದೇ ಇದ್ದು ಅವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಪೋಲಿಸ್ ಇಲಾಖೆ ಮುಂದಾಗಿದೆ ಎಂದು ಹೇಳಲಾಗುತ್ತಿದ್ದು, ಮಾಲಕರ ಪತ್ತೆಯ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.
