
ಐ ಎಫ್ ಸಿ ಗುತ್ತಿಗಾರು ಆಯೋಜಿಸಿದ ಜಿಲ್ಲಾ ಮಟ್ಟದ ಐ ಎಫ್ ಸಿ ರನ್ ಮ್ಯಾರಥಾನ್ ಗೆ ಫೆ.9 ರಂದು ವಳಲಂಬೆ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು. ದೀಪ ಪ್ರಜ್ವಲಿಸುವ ಮೂಲಕ ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಾಜೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಮಾಜಿ ಮಂಡಲ ಪ್ರಧಾನರಾದ ಮುಳಿಯ ತಿಮ್ಮಪ್ಪಯ್ಯ, ಸಮಾಜ ಸೇವಕ ಚಂದ್ರಶೇಖರ ಕಡೋಡಿ, ಮಾಯಿಲಪ್ಪ ಕೊಂಬೊಟ್ಟು ಉಪಸ್ಥಿತರಿದ್ದರು. ಮ್ಯಾರಥಾನ್ ನಲ್ಲಿ ಜಿಲ್ಲೆಯ ಹಲವಾರು ಕ್ರೀಡಾಪಟುಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದಿನೇಶ್ ಹಾಲೆಮಜಲು ಹಾಗೂ ಕುಮಾರಿ ಮಂದಾರ ಬಾಳುಗೋಡು ಆಗಮಿಸಿದ್ದರು. ಬಹುಮಾನ ವಿತರಣೆಯನ್ನು ವಿನ್ಯಾಸ್ ಕೊಚ್ಚಿ ನೆರವೇರಿಸಿದರು. .
ಈ ಕಾರ್ಯಕ್ರಮದಲ್ಲಿ ಐ ಎಫ್ ಸಿ ಉಪಾಧ್ಯಕ್ಷರಾದ ಕೌಶಿಕ್ ಶ್ಯಾಮ್, ಸುಮುಖ ರಾಮ್, ಶ್ರೀಶರಣ್ ಮೊಗ್ರ ಮತ್ತು ಮೊನಿಷ್ ಬಾಕಿಲ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಮುಳಿಯ ಸಾತ್ವಿಕ್ ನೇತೃತ್ವದಲ್ಲಿ ನಡೆದ ಮ್ಯಾರಥಾನ್ ಯಶಸ್ವಿಯಾಗಿ ನಡೆಸಲು ಕಾರ್ಯದರ್ಶಿಗಳಾದ ವರ್ಷಿತ್ ಕಡ್ತಲ್ ಕಜೆ, ಕಿರಣ್ ವಳಲಂಬೆ,ರಾಕೇಶ್ ಮೆಟ್ಟಿನಡ್ಕ ಮತ್ತು ಬಾಲಕೃಷ್ಣ ಉಜಿರಡ್ಕ ಸಹಕರಿಸಿದರು. ಸಂಯೋಜಕರಾಗಿ ಚರಣ್ ಕೊಂಬೊಟ್ಟುಕಾರ್ಯಕ್ರಮ ನಿರ್ವಹಿಸಿದರು.
