
ಕೊಲ್ಲಮೊಗ್ರು ಗ್ರಾಮದ ಗಡಿಕಲ್ಲು ವಿಷ್ಣುನಗರ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16 ರಂದು 5ನೇ ವರ್ಷದ ಒತ್ತೆಕೋಲ ಮಹೋತ್ಸವವು ನಡೆಯಲಿದ್ದು, ಫೆ.15 ರಂದು ಪ್ರಾತಃಕಾಲ 5:00 ಗಂಟೆಗೆ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ 9:30ಕ್ಕೆ ಗಣಪತಿಹೋಮ, ಬೆಳಿಗ್ಗೆ 10:00 ಗಂಟೆಗೆ ಉಗ್ರಾಣ ಮುಹೂರ್ತ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6:00 ಗಂಟೆಗೆ ಸ್ಥಾನದಿಂದ ಭಂಡಾರ ತೆಗೆಯುವುದು, ಸಂಜೆ 6:45ಕ್ಕೆ ತೊಡಂಙಲ್, ರಾತ್ರಿ 7:00 ಗಂಟೆಗೆ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ 8:00 ರಿಂದ ಅಂಗನವಾಡಿ ಪುಟಾಣಿಗಳಿಂದ, ಶಾಲಾ ವಿದ್ಯಾರ್ಥಿಗಳಿಂದ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 9:00 ಗಂಟೆಗೆ ಅನ್ನಸಂತರ್ಪಣೆ ನಡೆದು ರಾತ್ರಿ 10:30 ರಿಂದ ಶ್ರೀ ದೈವದ ಕುಳ್ಚಾಟ ನಡೆಯಲಿದೆ.
ಫೆ.16 ರಂದು ಬೆಳಿಗ್ಗೆ 4:30ಕ್ಕೆ ಶ್ರೀ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 6:30ಕ್ಕೆ ಶ್ರೀ ದೈವದ ಬಾರಣೆ, ಬೆಳಿಗ್ಗೆ 7:00 ಗಂಟೆಗೆ ಮಾರಿಕಳ, ಬೆಳಿಗ್ಗೆ 8:30ಕ್ಕೆ ಗುಳಿಗ ನೇಮ ಹಾಗೂ ಬೆಳಿಗ್ಗೆ 10:00 ಗಂಟೆಗೆ ಪ್ರಸಾದ ವಿತರಣೆ ನಡೆಯುವುದರೊಂದಿಗೆ ಒತ್ತೆಕೋಲ ಮಹೋತ್ಸವವು ಸಂಪನ್ನಗೊಳ್ಳಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
