
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ವತಿಯಿಂದ ಪಿಎಂ ಪೋಷಣ್ ಅಭಿಯಾನದಡಿ ಕೆಪಿಎಸ್ ಪ್ರೌಢ ಶಾಲೆ ಬೆಳ್ಳಾರೆಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಅಡುಗೆ ತಯಾರಿ ಸ್ಪರ್ಧೆಯಲ್ಲಿ ವಿದ್ಯಾಬೋಧಿನೀ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿಗಳಾದ ಗಿರಿಜಾ ಕೆ, ಜಾನಕಿ ಹಾಗೂ ಸಾವಿತ್ರಿ ತಂಡ ಸತತ ನಾಲ್ಕನೇ ಬಾರಿ ಪ್ರಶಸ್ತಿ ಪಡೆದುಕೊಂಡಿದೆ. ಕೆಪಿಎಸ್ ಪ್ರೌಢ ಶಾಲೆ ಬೆಳ್ಳಾರೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಎಣ್ಮೂರು, ಪಂಜ, ಗುತ್ತಿಗಾರು ಕ್ಲಸ್ಟರ್ ನ ಸುಮಾರು 35 ತಂಡಗಳು ಭಾಗವಹಿಸಿದ್ದವು. ಬಾಳಿಲ ಪ್ರಾಥಮಿಕ ಶಾಲಾ ತಂಡ ಕಳೆದ 3 ವರ್ಷಗಳಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದ್ದು ಮಾತ್ರವಲ್ಲದೆ ಜಿಲ್ಲಾ ಮಟ್ಟದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.