- Thursday
- February 20th, 2025

ಕಡಬ ಬ್ಲಾಕ್ ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಯುವ ಮುಖಂಡ ಪ್ರದೀಪ್ ಕಳಿಗೆ ಅವರು ನೇಮಕಗೊಂಡಿದ್ದಾರೆ. ಇವರು ಬಿಳಿನೆಲೆ ವಲಯ ಕಾಂಗ್ರೆಸ್ ಕಾರ್ಯದರ್ಶಿ ಆಗಿದ್ದರು, ಕಡಬ ಬ್ಲಾಕ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ದುಡಿದಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಸಹ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ. ಇವರು ಹಿರಿಯ ಕಾಂಗ್ರೆಸಿಗ ಜನಾರ್ಧನ ಗೌಡ ಕಳಿಗೆ ಇವರ ಪುತ್ರ.

ರಾಜ್ಯ ಪ್ರಶಸ್ತಿ ಪುರಸ್ಕೃತ ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಹಾಗೂ ಭಾವೈಕ್ಯ ಚಿಗುರು ವೇದಿಕೆ ಪೆರುವಾಜೆ ಇದರ ಸಹಯೋಗದೊಂದಿಗೆ ಪೆರುವಾಜೆ ಮ್ಯಾರಥಾನ್ 2025 ಫೆ.09 ರಂದುಯುವಕ ಮಂಡಲದ ಆವರಣದಲ್ಲಿ ನಡೆಯಿತು.. ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕೆ ಎಮ್ ಮ್ಯಾರಥಾನ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲ.ಉಷಾದೇವಿ ರಾವ್ ಪೆರುವಾಜೆ, ಭಾವೈಕ್ಯ...

ಕೊಲ್ಲಮೊಗ್ರು ಗ್ರಾಮದ ಗಡಿಕಲ್ಲು ವಿಷ್ಣುನಗರ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16 ರಂದು 5ನೇ ವರ್ಷದ ಒತ್ತೆಕೋಲ ಮಹೋತ್ಸವವು ನಡೆಯಲಿದ್ದು, ಫೆ.15 ರಂದು ಪ್ರಾತಃಕಾಲ 5:00 ಗಂಟೆಗೆ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ 9:30ಕ್ಕೆ ಗಣಪತಿಹೋಮ, ಬೆಳಿಗ್ಗೆ 10:00 ಗಂಟೆಗೆ ಉಗ್ರಾಣ ಮುಹೂರ್ತ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ,...

ಫೆ 08 ರಂದು ಕನಕಮಜಲಿನ ಸುಣ್ಣಮೂಲೆಯಲ್ಲಿ ಪಾದಾಚಾರಿಗಳ ಸಾವಿಗೆ ಕಾರಣವಾಗಿದ್ದ ವಾಹನ ಪತ್ತೆ ಹಚ್ಚುವಲ್ಲಿ ಪೋಲೀಸರು ಯಶಸ್ವಿಯಾಗಿದ್ದು ಇಂದು ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಭೇದಿಸಲು ಪೋಲೀಸರು ವ್ಯಾಪಕ ತನಿಖೆ ಆರಂಭಿಸಿದ್ದರು. ಜಾಲ್ಸೂರಿನಿಂದ ಹಿಡಿದು ಸುಳ್ಯದ ತನಕ ಎಲ್ಲಾ ರಸ್ತೆ ಕಾಣುವ ಸಿಸಿ ಟಿವಿ ಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಒಂದು ಇಕೋ ಕಾರು ಸಂಶಯಾಸ್ಪದವಾಗಿ...

ಚೈತ್ರ ಯುವತಿ ಮಂಡಲ ಅಜ್ಜಾವರ , ಪ್ರತಾಪ ಯುವಕ ಮಂಡಲ ಅಜ್ಜಾವರ ಹಾಗೂ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ತುಳುನಾಡಿನ ವಿಶಿಷ್ಟ ಪರ್ಬವಾದ ಕೆಡ್ಡಸ ಆಚರಣೆ ಕಾರ್ಯಕ್ರಮ ಮಾವಿನಪಳ್ಳದಲ್ಲಿ ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ವಹಿಸಿದ್ದರು. ಕೆಡ್ಡಸ ಆಚರಣೆಯ ಮಹತ್ವದ ಬಗ್ಗೆ ಮಾಹಿತಿಯನ್ನು ಶ್ರೀ ಶಾಸ್ತಾವೇಶ್ವರ ದೇವಸ್ಥಾನ...

ಜೀವನದಿಯಾಗಿರುವ ಪಯಸ್ವಿನಿ ಸುಳ್ಯದ ನಗರ ಹಾಗೂ ಅಜ್ಜಾವರ ಗ್ರಾಮದಲ್ಲಿನ ಜನರ ಕುಡಿಯುವ ನೀರಿಗೆ ವಿಷಪ್ರಾಶನವಾಗಿದ್ದು ಇದೀಗ ಮೀನು ಸೇರಿದಂತೆ ಹಲವು ಜಲಚರಗಳ ಮಾರಣಹೋಮವೇ ನಡೆದು ಹೋಗಿದೆ. ಫೆ.9ರಂದು ಸುಳ್ಯದ ಪಯಸ್ವಿನಿ ನದಿಯ ನಾಗಪಟ್ಟಣ, ಭಸ್ಮಡ್ಕ ವ್ಯಾಪ್ತಿಯಲ್ಲಿ ಸಾವಿರಾರು ಮೀನುಗಳು ಸಾವಿಗೀಡಾಗಿದ್ದು, ದಿ.10 ರಂದು ಮುಂಜಾನೆ ಮತ್ತೆ ಕಾಂತಮಂಗಲ ದಲ್ಲಿಯೂ ಮೀನುಗಳು ಸತ್ತು ತೇಲಲಾರಂಭಿಸಿದವು. ನದಿ ನೀರಿನಲ್ಲಿ...

ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನದ ಜಾತ್ರಾ ಮುಹೂರ್ತ ಅಂಗವಾಗಿ ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಶಂಖಚೂಡ ಕ್ಷೇತ್ರದಲ್ಲಿ ಫೆ.10 ರಂದು ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಆಡಳಿತ ಮೊಕ್ತೇಸರರಾದ ಕಾಳಿಕಾ ಪ್ರಸಾದ್ ಮುಂಡೋಡಿ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ...
33 ಕಾವು - ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.11 ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್...

ಮಡಪ್ಪಾಡಿಯ ಶ್ರೀರಾಮ ಭಜನಾ ಮಂಡಳಿಯ ಸಭೆ ಫೆ.07 ರಂದು ನಡೆಯಿತು. ಈ ಸಭೆಯಲ್ಲಿ ನೂತನ ಸಮಿತಿ ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ವಿನ್ಯಾಸ್ ಪಾರೆಮಜಲು, ಕಾರ್ಯದರ್ಶಿಯಾಗಿ ಪ್ರೇಕ್ಷಿತ್ ಬೊಮ್ಮೆಟ್ಟಿ , ಉಪಾಧ್ಯಕ್ಷರಾಗಿ ರಂಜಿತ್ ಬೊಮ್ಮೆಟ್ಟಿ ಹಾಗೂ ಕುಶನ್ ಅಂಬೆಕಲ್ಲು, ಕೋಶಾಧಿಕಾರಿಯಾಗಿ ಚೇತನ್ ಕುಚ್ಚಾಲ, ಜೊತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಬೊಮ್ಮೆಟ್ಟಿ ಹಾಗೂ ಸದಸ್ಯರು ಮತ್ತು ಗೌರವ ಸಲಹೆಗಾರರನ್ನು...

All posts loaded
No more posts