
ಉಬೈಸ್ ಗೂನಡ್ಕ ರವರಿಗೆ ಸಿಲ್ವರ್ ಮೆಡಲ್ ಮತ್ತು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿಯನ್ನು ರಾಮಕೃl ಮಠದ ಕಾರ್ಯದರ್ಶಿ ಸ್ವಾಮಿ ಅತಿ ದೇವಾನಂದ ಮಹಾರಾಜ್, ಐಎಎಸ್ ಅಧಿಕಾರಿಗಳು ಮತ್ತು ಬಿಹಾರದ ಮಾಜಿ ಕಾರ್ಮಿಕ ಸಚಿವ ಸುರೇಂದ್ರ ರಾಂ ಅವರಿಂದ ಪ್ರದಾನ ಮಾಡಲಾಯಿತು.
ಉಬೈಸ್ ಅವರು ಯೆನೆಪೋಯಾ ವಿಶ್ವವಿದ್ಯಾಲಯದಲ್ಲಿ ಸಕ್ರಿಯ NSS ಸ್ವಯಂಸೇವಕರಾಗಿ, ಚುರುಕು ವಿದ್ಯಾರ್ಥಿಯಾಗಿ ಮತ್ತು ತುರ್ತು ರಕ್ತದಾತರಾಗಿ ವಿಶಿಷ್ಟ ಹೆಸರು ಮಾಡಿದ್ದಾರೆ. ಯೆನಪೋಯಾ ಕಾಲೇಜಿನ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿರುವ ಅವರು ರಾಷ್ಟ್ರೀಯ ಶಿಬಿರದಲ್ಲೂ ಭಾಗವಹಿಸಿದ್ದಾರೆ. NSS ಮತ್ತು ಸಾಮಾಜಿಕ ಸೇವೆಯಲ್ಲಿನ ಅವರ ಸಾಧನೆಗಳನ್ನು ಗುರುತಿಸಿ, ಬಿಹಾರ ಸರ್ಕಾರ ಮತ್ತು ಫೇಸ್ ಆಫ್ ಫ್ಯೂಚರ್ ಇಂಡಿಯಾ ಸಂಸ್ಥೆ ಇವರನ್ನು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿಗೆ ಆಯ್ಕೆ ಮಾಡಿತು.
ಪ್ರಸ್ತುತ ಅವರು ಯೆನಪೋಯಾ ವಿಶ್ವವಿದ್ಯಾಲಯದಲ್ಲಿ B.Com ACCA ಅಭ್ಯಾಸ ಮಾಡುತ್ತಿದ್ದಾರೆ ಮತ್ತು NSUI ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯಲ್ಲಿ ಅವರು ಅನೇಕ ಪ್ರತಿಭಟನಗಳಲ್ಲಿ ಭಾಗವಹಿಸಿದ್ದು, NSUIಯಲ್ಲೂ ಗುರುತಿಸಿಕೊಳ್ಳುವಂತಾದರು.
ಆದ್ದರಿಂದ, ಉಬೈಸ್ ಅವರು ಕೇವಲ ನಾಯಕತ್ವ ಮತ್ತು ಚಟುವಟಿಕೆಯಲ್ಲಿ ಮಾತ್ರವಲ್ಲ, ಶೈಕ್ಷಣಿಕವಾಗಿ ಸಹ ಮಿಂಚಿದ್ದಾರೆ. ಅವರು 10ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿ, 2ನೇ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ ಮತ್ತು ಪದವಿಯಲ್ಲಿ ಉತ್ತಮ ಶ್ರೇಣಿಯನ್ನು ಕಾಯ್ದುಕೊಂಡಿದ್ದಾರೆ.
