ಕನಕಮಜಲಿನ ಸುಣ್ಣಮೂಲೆ ಬಳಿ ಅಪಘಾತ ನಡೆಸಿ ಇಬ್ಬರು ಪಾದಚಾರಿಗಳ ಸಾವಿಗೆ ಕಾರಣವಾದ ವಾಹನವನ್ನು ಪತ್ತೆ ಹಚ್ಚುವಲ್ಲಿ ಸುಳ್ಯ ಪೋಲೀಸರು ಯಶಸ್ವಿಯಾಗಿದ್ದಾರೆ.
ಸುಳ್ಯದ ಬೀರಮಂಗಲದ ವ್ಯಕ್ತಿಯೊಬ್ಬರಿಗೆ ಸೇರಿದ ಇಕೋ ವಾಹನ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಬಳಿಕ ತನಿಖೆ ಮುಂದುವರೆಸಿದ್ದು ಕಾರಿನ ಚಾಲಕ ಮತ್ತು ಮಾಲಿಕರನ್ನು ವಿಚಾರಣೆ ನಡೆಸಲಾಗುತ್ತಿದ್ದು, ನಾಳೆ ಮುಂಜಾನೆ ಕಾರನ್ನು ಸೀಝ್ ಮಾಡಲಾಗುವುದು ಎಂದು ಪೋಲಿಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
