
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಫೆ.07 ರಂದು ಚುನಾವಣೆ ನಡೆದಿದ್ದು ಒಟ್ಟು 13 ಸ್ಥಾನಗಳ ಪೈಕಿ ಸಹಕಾರ ಭಾರತಿ ಅಭ್ಯರ್ಥಿಗಳು 11 ಸ್ಥಾನ ಗೆದ್ದು ಬೀಗಿದ್ದು, ಸಹಕಾರಿ ಸಮನ್ವಯ ರಂಗ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಸಹಕಾರ ಭಾರತಿಯ ಪ್ರಭಾಕರ ಆಳ್ವ , ಅಜಿತ್ ರಾವ್ , ರವಿಪ್ರಸಾದ್ ರೈ ಕಳಂಜ, ರಾಮಪ್ರಸಾದ್ ಕಾಂಚೋಡು, ಹರ್ಷ ಜೋಗಿಬೆಟ್ಟು , ಮಹಿಳಾ ಮೀಸಲು ಸ್ಥಾನದಿಂದ ಸರಿತಾ ಕಂಡಿಕಟ್ಟ, ಪಂಕಜಾಕ್ಷಿ, ಪ್ರವರ್ಗ ಎ ಕ್ಷೇತ್ರದಿಂದ ಪ್ರಶಾಂತ್ ಕುಮಾರ್ , ಪ್ರವರ್ಗ ಬಿ ಕ್ಷೇತ್ರದಿಂದ ರವೀಂದ್ರ ಟಪ್ಪಾಲುಕಟ್ಟೆ , ಪ.ಪಂಗಡ ಶುಭ ಕುಮಾರ್ ಬಾಳೆಗುಡ್ಡೆ , ಪ.ಜಾತಿ ಮೀಸಲು ಕ್ಷೇತ್ರದಿಂದ ರಾಮಣ್ಣ ಪರವ ಮತಗಳನ್ನು ಪಡೆದು ವಿಜೇತರಾದರೆ, ಸಹಕಾರಿ ಸಮನ್ವಯ ರಂಗದ ಅಭ್ಯರ್ಥಿಗಳಾದ ಎನ್. ವಿಶ್ವನಾಥ ರೈ ಹಾಗೂ ಕೆದಿಲ ಸುಬ್ರಾಯ ಭಾರದ್ವಾಜ್ ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
