
ಕೊಲ್ಲಮೊಗ್ರದ ಶ್ರೀ ಮಯೂರ ಕಲಾಮಂದಿರದಲ್ಲಿ ನೂತನವಾಗಿ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಫೆ. 02 ರಂದು ಉದ್ಘಾಟನೆಗೊಂಡಿತು. ಸುಳ್ಯ ತಾಲೂಕಿನ ಭಜನಾ ಪರಿಷತ್ತಿನ ಕಾರ್ಯದರ್ಶಿ ಸತೀಶ್ ಟಿ ಎನ್ ಅವರ ಮಾರ್ಗದರ್ಶನದಲ್ಲಿ ನೀಡಿದರು.
ಗೌರವ ಸಲಹೆಗಾರರಾಗಿ ಸತೀಶ್ ಟಿ.ಎನ್., ಗೌರವ ಅಧ್ಯಕ್ಷರಾಗಿ ಮಾಧವ ಚಾಂತಾಳ, ಅಧ್ಯಕ್ಷರಾಗಿ ಹೇಮಂತ್ ದೊಲನ ಮನೆ, ಕಾರ್ಯದರ್ಶಿಯಾಗಿ ತೀರ್ಥರಾಮ ದೋಣಿಪಳ್ಳ ಆಯ್ಕೆಯಾದರು.
ಸದಸ್ಯರುಗಳಾಗಿ ಯೋಗೀಶ್ ಚೂಂತಾರು, ವಿವೇಕ್ ಮಿತ್ತೋಡಿ, ಸುಧಾಮಣಿ ಕುಂಜ್ಞೆಟಿ, ಚಂದ್ರಶೇಖರ ಕೊಂದಾಳ, ದಿಗಂತ್ ಕೊಂದಾಳ, ಸಚಿನ್ ಪೊನ್ನಚಂದ್ರ, ಪ್ರಖ್ಯಾತ್ ಪೈಕ ಆಯ್ಕೆಯಾದರು. ಹೇಮಂತ್ ದೊಲನ ಮನೆ ಸ್ವಾಗತಿಸಿ, ತೀರ್ಥರಾಮ ದೋಣಿಪಳ್ಳ ವಂದಿಸಿದರು.
