
ಜೇಸಿಐ ಪಂಜ ಪಂಚಶ್ರೀ, ಮೂಡೂರು ಇನ್ಫೋಟೆಕ್ ಪಂಜ ಇವರ ಜಂಟಿ ಆಶ್ರಯದಲ್ಲಿ ಕೊಲ್ಲಮೊಗ್ರದ ಕೆ .ವಿ .ಜಿ. ಅನುದಾನಿತ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಸರಣಿ ತರಬೇತಿ ಕಾರ್ಯಗಾರದ ಅಂಗವಾಗಿ ನಲಿವಿನ ಓದು ಗೆಲುವಿನ ಕಡೆಗೆ ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರವು ಫೆ.06 ರಂದು ನಡೆಯಿತು.
ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷರಾದ JCHGF ವಾಚಣ್ಣ ಕೆರೆಮೂಲೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಪ್ರಭಾಕರ ಕಿರಿಭಾಗ ಮುಖ್ಯ ಅತಿಥಿಗಳಾಗಿದ್ದರು. ಕೆವಿಜಿ ಅನುದಾನಿತ ಪ್ರೌಢಶಾಲೆಯ ಸಹಶಿಕ್ಷಕ ವೆಂಕಟ್ರಮಣ ಕೆ.ಕೆ. ಗೌರವ ಉಪಸ್ಥಿತರಿದ್ದರು.
ತರಬೇತುದಾರರಾಗಿ ಜೇಸಿಐ ವಲಯ ತರಬೇತುದಾರರಾದ JFM ಸವಿತಾರ ಮುಡೂರು ಆಗಮಿಸಿದ್ದರು.
ವೇದಿಕೆಯಲ್ಲಿ ಕಮಲಾಕ್ಷ ಮುಳುಬಾಗಿಲು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಮಲಾಕ್ಷ ಮುಳ್ಳುಬಾಗಿಲು,ಕಾರ್ಯಕ್ರಮದ ನಿರ್ದೇಶಕ ಜೆಸಿ ಮದನ್ ಕೊಲ್ಯ ಕಾರ್ಯದರ್ಶಿJcHGF ಅಶ್ವಥ್ ಬಾಬ್ಲು ಬೆಟ್ಟು ಉಪಸ್ಥಿತರಿದ್ದರು
