
ಅಜ್ಜಾವರ ಗ್ರಾಮದ ಪಡ್ಡಂಬೈಲು ನಿವಾಸಿ ಶಂಕರ ಪಾಟಾಳಿಯವರ ಮನೆಯ ಅಂಗಳಕ್ಕೆ ಎರಡು ಬಾರಿ ಬಂದ ಚಿರತೆ ಎರಡು ನಾಯಿಗಳ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಬಿಎಸ್ಎನ್ ಎಲ್ ನಿವೃತ್ತ ಉದ್ಯೋಗಿ ಪಡ್ಡಂಬೈಲು ಶಂಕರ ಪಾಟಾಳಿಯವರ ಅಂಗಳದಲ್ಲಿ ರಾತ್ರಿ ಸುಮಾರು 1.40 ಸುಮಾರಿಗೆ ಚಿರತೆಯೊಂದು ನಾಯಿ ಒಂದನ್ನು ಹಿಡಿದು ಅಂಗಳದಲ್ಲೇ ಕೊಂದು ತಿಂದು ಮುಗಿಸುತಿದ್ದ ವೇಳೆ ಮನೆಯ ಇನ್ನೊಂದು ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಹೊರಗೆ ಬರುವಷ್ಟರಲ್ಲಿ ಅಲ್ಲಿಂದ ಚಿರತೆ ಪರಾರಿಯಾಗಿದೆ. ಅದೇ ರಾತ್ರಿ ಮುಂಜಾನೆ ಸುಮಾರು 5 ಗಂಟೆ 25 ನಿಮಿಷಕ್ಕೆ ಪುನಃ ಬಂದು ಇನ್ನೊಂದು ನಾಯಿಯನ್ನು ಕೊಂದು ಹಾಕಿದ್ದು ಆ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡು ಲೈಟ್ ಹಾಕಿದಾಗ ಅಲ್ಲಿಂದ ಮತ್ತೆ ಪರಾರಿಯಾಗಿದೆ. ಒಂದೇ ರಾತ್ರಿಯಲ್ಲಿ ಎರಡು ಬಾರಿ ಅಂಗಳದಲ್ಲಿ ಸಂಚಾರ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
