
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಅಡಳಿತಾಧಿಕಾರಿಯಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಉಪತಹಶೀಲ್ದಾರ್ ಚಂದ್ರಕಾಂತ ಎಂ. ಆರ್. ಅವರನ್ನು ದೇವಸ್ಥಾನದ ಪರವಾಗಿ ತಂತ್ರಿವರ್ಯರು ಇಂದು ಶಾಲು ಹೊದಿಸಿ ಫಲ, ಪುಷ್ಪ, ಪ್ರಸಾದ, ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಕಾಮತ್, ನಾರಾಯಣ ಕೇಕಡ್ಕ, ಕುಸುಮಾಧರ ಎ.ಟಿ., ಚಂದ್ರಶೇಖರ ಅಡ್ಪಂಗಾಯ, ದೇವಿಪ್ರಸಾದ್ ಕುದ್ಪಾಜೆ, ವಿಠಲ್ ಬಾಣೂರು, ಸದಾನಂದ ಮೂಲೆಮಜಲು, ನಮಿತಾ ಎ.ಕೆ.,ಶ್ವೇತಾ ಪ್ರಶಾಂತ್, ಅರ್ಚಕರಾದ ನೀಲಕಂಠ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
