
ಕೊಲ್ಲಮೊಗ್ರು ಇಲ್ಲಿನ ಗಾಣಿಗನಮಜಲು ಎಂಬಲ್ಲಿ ಫೆ.04 ರಂದು ಅಗ್ನಿಗುಳಿಗ ಹಾಗೂ ರಾಜ ದೈವದ ನೇಮೋತ್ಸವವು ಭಕ್ತಿ ಸಡಗರದಿಂದ ನಡೆಯಿತು. ಕಟ್ಟ ಕೊಚ್ಚಿಲ ಮಯೂರವಾಹನ ದೇವಸ್ಥಾನದಲ್ಲಿ ವನಭೋಜನ ನಡೆದು ನಂತರ ದೈವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ನಡೆದು, ನಂತರ ಕಟ್ಟ ಮನೆತನದಿಂದ ದೈವಸ್ಥಾನಕ್ಕೆ ದೈವದ ಭಂಡಾರ ಬಂದು ನೇಮ ನಡೆದು ಅಲ್ಲಿಂದ ಮಿತ್ತೋಡಿ ಶ್ರೀ ಪುರುಷ ದೈವಸ್ಥಾನಕ್ಕೆ ಭಂಡಾರ ಬಂದು ಅದೇ ದಿನ ರಾತ್ರಿ ಮಿತ್ತೋಡಿಯಿಂದ ದೀವಟಿಗೆ ಮೂಲಕ ಅಗ್ನಿ ತಂದು ಗಾಣಿಗಮಜಲಿನಲ್ಲಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಿ ನಂತರ ಅಗ್ನಿಗುಳಿಗ ದೈವದ ನೇಮೋತ್ಸವ ನಡೆಯಿತು.
ನೂರಾರು ಭಕ್ತರು ನೆಮೋತ್ಸವಕ್ಕೆ ಬಂದು ದೈವದ ಪ್ರಸಾದ ಸ್ವೀಕರಿಸಿದರು.
ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಊರ ಹಾಗೂ ಪರವೂರ ಭಕ್ತಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
