ಐವರ್ನಾಡಿನ ಹಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿ ಪಂಚಲಿಂಗಗಳಿಂದ ಪ್ರತಿಷ್ಟಾಪನೆಗೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಫೆ. 8, 9, 10 ರಂದು ನಡೆಯುವ ಪ್ರತಿಷ್ಟಾ ವಾರ್ಷಿಕೋತ್ಸವ ಪ್ರಯುಕ್ತ ಫೆ.2 ರಂದು ಬೆಳಿಗ್ಗೆ ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿಯ ಬಳಿಕ ಅರ್ಚಕರಾದ ರಾಮಚಂದ್ರ ಪಿ.ಜಿ. ಯವರಿಂದ ಗೊನೆ ಕಡಿಯುವ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಯ ನೂತನ ಅಧ್ಯಕ್ಷರಾದ ರಾಜೇಶ್ ಭಟ್ ಬಾಂಜಿಕೋಡಿ, ಪೂರ್ವಾಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ರಾಜಾರಾಮ ರಾವ್ ಉದ್ದಂಪಾಡಿ, ವೈದಿಕ ಮುಖ್ಯಸ್ಥರು, ವಸಿಷ್ಠ ಭಟ್ ನಾಟಿಕೇರಿ ನರಸಿಂಹ ಭಟ್, ಅರ್ಚಕರ ಸಹಾಯಕರು. ಪದ್ಮನಾಭ ಭಟ್ ಪರಕಜೆ, ಮಾಜಿ ಅರ್ಚಕರು. ಕಾರ್ತಿಕ ದೇರಾಜೆ, ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಎನ್. ಮನ್ಮಥ, ಶಿವಪ್ಪ ಗೌಡ ನೆಕ್ಕರಕಜೆ, ಡಿ.ಲಕ್ಮಣ ಗೌಡ, ಲೋಕೇಶ್ ಚೆಮ್ನೂರು, ಮಡಿಕೇರಿ ಹರೀಶ್ ಗೌಡ, ದೇರಾಜೆ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಗಳಾದ ಬಾಲಕೃಷ್ಣ ಗೌಡ ಮಡ್ತಿಲ, ಕರುಣಾಕರ ಗೌಡ ಯು. ಉದ್ದಂಪಾಡಿ, ಶಿವರಾಮ ಗೌಡ ನೆಕ್ರಪ್ಪಾಡಿ, ರಾಧಾಕೃಷ್ಣ ಗೌಡ ಚಾಕೋಟೆ, ಮುರಳೀಧರ ಕೊಚ್ಚಿ, ಶೀಲಾವತಿ ಕುಳ್ಳಂಪಾಡಿ, ಆಶಾ ಎಂ.ಎಸ್. ಮಡ್ತಿಲ, ಗಳಲ್ಲದೆ ಯಶವಂತ ಬಾರೆತಡ್ಕ ಕಛೇರಿ ನಿರ್ವಾಹಕರು, ಹೊನ್ನಪ್ಪ ಪಡ್ಡಂಬೈಲು ಹಾಗೂ ದೇರಾಜೆ, ಪುತ್ತಿಲ, ಮಡ್ತಿಲ, ಚೆಮ್ನೂರು,ಕುಳ್ಳಂಪಾಡಿ ಭಾಗದ ಭಕ್ತಾಧಿಗಳು ಪಾಲ್ಗೊಂಡಿದ್ದರು.
(ಫೋಟೋ, ವರದಿ : ಬಾಲು ದೇರಾಜೆ)