Ad Widget

ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಹೊಸ ವರ್ಷಾಚರಣೆ – ಬಂಧನ, ಬಿಡುಗಡೆ

ಅರಂತೋಡು: ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಹೊಸ ವರ್ಷ ಆಚರಣೆಗೆ ಸಿದ್ಧತೆ ಮಾಡುತ್ತಿದ್ದ ಆರೋಪದಲ್ಲಿ 30 ಮಂದಿ ಯುವಕರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಡಿ.31 ರಂದು ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ...

ತೊಡಿಕಾನ : ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ವಾಟರ್ ಬೆಡ್ ಹಸ್ತಾಂತರ

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ಸಂಪಾಜೆ ವಲಯ ತೊಡಿಕಾನ ಕಾರ್ಯಕ್ಷೇತ್ರದ ಆದಿಶಕ್ತಿ ಸಂಘದ ಸದಸ್ಯ ರಾದ ವಸಂತಿ ರವರ ಅತ್ತೆ ರಾಮಕ್ಕ‍ರವರಿಗೆ ವಾಟರ್ ಬೆಡ್ ನೀಡಲಾಯಿತು. ರಾಮಕ್ಕರವರು  ಅನಾರೋಗ್ಯದಿಂದಿದ್ದು ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ನ್ನು ವಲಯ ಜನಜಾಗ್ರತಿ ಅಧ್ಯಕ್ಷರಾದ ಸೋಮಶೇಖರ ಪೈಕ ರವರು ವಿತರಿಸಿದರು.  ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.
Ad Widget

ಪೆರುವಾಜೆ : ಮುಕ್ಕೂರು ಶ್ರೀ ಉಳ್ಳಾಲ್ತಿ  ಭಕ್ತವೃಂದದ ಸದಸ್ಯರಿಂದ ಕರಸೇವೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ಹಾಗೂ ಶ್ರೀ ಕ್ಷೇತ್ರ ಪೆರುವಾಜೆ ಭಕ್ತವೃಂದದಿಂದ ಜ‌.1 ರಂದು ರಾತ್ರಿ ಕರಸೇವೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ  ದಿನಾಂಕ 16-01-2025 ರಿಂದ 21-01-2025 ರವರೆಗೆ ವಾರ್ಷಿಕ ಜಾತ್ರೆ ಮತ್ತು ಬ್ರಹ್ಮ ರಥೋತ್ಸವ ನಡೆಯಲಿದೆ.

ಸುಳ್ಯ: ಬ್ರಹ್ಮರಗಯ 47ನೇ ವರ್ಷದ ಅಯ್ಯಪ್ಪ ದೀಪೋತ್ಸವ

ಶ್ರೀ ಕ್ಷೇತ್ರ ಬ್ರಹ್ಮರಗಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ 47ನೇ ವರ್ಷದ ಅಯ್ಯಪ್ಪ ದೀಪೋತ್ಸವ ಮತ್ತು ರಂಗಪೂಜೆ ಮಹೋತ್ಸವ ಜ 01ರಂದು ವಿಜೃಂಭಣೆಯಿಂದ ನಡೆಯಿತು.ಹಳೆಗೇಟು ನಿಂದ ಕೇರಳದ ಚೆಂಡೆ ವಾದನದೊಂದಿಗೆ, ಶ್ರೀ ದುರ್ಗಾಶಕ್ತಿ ಸೇವಾ ಬಳಗ ಹೊಸಗದ್ದೆ, ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿ, ಶ್ರೀ ಗಜಾನನ ಭಜನಾ ಮಂದಿರ...

ಹರಿಹರ ಪಳ್ಳತ್ತಡ್ಕ : ಜ.02 ರಂದು ಸಚಿನ್ ಕ್ರೀಡಾ ಸಂಘದಿಂದ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ

ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಹಾಗೂ ದಾನಿಗಳ ಸಹಕಾರದೊಂದಿಗೆ ಜನರಿಗೆ ತುರ್ತು ಸಂದರ್ಭಗಳಲ್ಲಿ ಉಪಯೋಗವಾಗಬೇಕೆಂಬ ಸದುದ್ದೇಶದಿಂದ ಖರೀದಿಸಿದ ನೂತನ ಆಂಬ್ಯುಲೆನ್ಸ್ ವಾಹನದ ಲೋಕಾರ್ಪಣಾ ಕಾರ್ಯಕ್ರಮವು ಜ.02 ರಂದು ನಡೆಯಲಿದ್ದು, ಸ್ಥಳೀಯ ವೈದ್ಯರುಗಳು ದೀಪ ಬೆಳಗಿಸುವುದರೊಂದಿಗೆ ನೂತನ ಆಂಬ್ಯುಲೆನ್ಸ್ ಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದವರು, ಊರಿನ...

ಗುತ್ತಿಗಾರು : ಚರಂಡಿಯ ಅವ್ಯವಸ್ಥೆಯಿಂದ ಕೊಳಚೆ ನೀರು  ಸಂಗ್ರಹ – ರೋಗ ಉತ್ಪತ್ತಿಯ ತಾಣ

ಗುತ್ತಿಗಾರು ಮುಖ್ಯಪೇಟೆಯಲ್ಲಿರುವ ಬಸ್ ನಿಲ್ದಾಣದ ಬಳಿಯ ಚರಂಡಿಯ ಅವ್ಯವಸ್ಥೆಯಿಂದಾಗಿ  ಕೊಳಚೆ ನೀರು ಸಂಗ್ರಹವಾಗಿದೆ. ಚರಂಡಿ ತೆರೆದ ಸ್ಥಿತಿಯಲ್ಲಿರುವುದರಿಂದ ಪ್ರಾಣಿ,ಪಕ್ಷಿಗಳು ಕೊಳಚೆ ನೀರನ್ನು ಬಳಸುವಂತಾಗಿದೆ. ಇದು ಹೀಗೆ ಮುಂದುವರೆದರೇ ಸಾಂಕ್ರಾಮಿಕ ರೋಗ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಈ  ಬಗ್ಗೆ  ಸ್ಥಳಿಯಾಡಳಿತ ಹಾಗೂ ಆರೋಗ್ಯ ಇಲಾಖೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕುಂಬಳಚೇರಿ ಶಾಲೆಗೆ ಸ್ಮಾರ್ಟ್ ಟಿ.ವಿ ಹಸ್ತಾಂತರ

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇದರ ಅಡಿಯಲ್ಲಿ ಕರ್ನಾಟಕ ಸಂಭ್ರಮ -50 2024-25 ನೇ ಸಾಲಿನ ಸ್ಮಾರ್ಟ್ ಟಿ.ವಿ.ಯನ್ನು ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ, ಹಿರಿಯ ರಾಜಕಾರಣಿ, ಊರಿನ ಹಿರಿಯರಾದ ಪ್ರೊ.ರಾಧಾಕೃಷ್ಣ ಕೆ.ಇ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಂಬಳಚೇರಿ ಹಿ.ಪ್ರಾ ಶಾಲೆಗೆ ನೀಡಲಾಯಿತು.ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಇದ್ದರು.

ಕುಕ್ಕೆ: ಹೊಸವರ್ಷಕ್ಕೆ ಭಕ್ತರಿಂದ ದೇವಳಕ್ಕೆ ಪುಷ್ಪಾಲಂಕಾರ ಸೇವೆ – ಬೆಂಗಳೂರಿನ ಉದ್ಯಮಿಗಳಿಂದ ಸೇವೆ

(ರತ್ನಾಕರ ಸುಬ್ರಹ್ಮಣ್ಯ) ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಹೊಸ ವರ್ಷದ ಅಂಗವಾಗಿ ಭಕ್ತರು ಪುಷ್ಪಾಲಂಕಾರ ಸೇವೆ ನೆರವೇರಿಸಿದ್ದಾರೆ.ಬೆಂಗಳೂರಿನ ಭಕ್ತರು ನಿರಂತರವಾದ 7ನೇ ವರ್ಷದ ತಮ್ಮ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದ್ದಾರೆ. ಸುಮಾರು ರೂ 9 ಲಕ್ಷ ವೆಚ್ಚದ ಹೂವುಗಳನ್ನು ಉಪಯೋಗಿಸಿಕೊಂಡು ಶೃಂಗಾರ ಮಾಡಿದ್ದಾರೆ. ತೆಂಗಿನ ಸಿರಿ, ತರಕಾರಿ, ಹಣ್ಣುಗಳು ಮತ್ತು 6 ಬಗೆಯ ಹೂವನ್ನು ಉಪಯೋಗಿಸಿಕೊಂಡು...

ಜನವರಿ 31 ರ ವರೆಗೆ ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ

ರೇಶನ್ ಕಾರ್ಡ್ ತಿದ್ದುಪಡಿಗೆ ಸರಕಾರ ಅವಕಾಶ ಕಲ್ಪಿಸಿದೆ. ಜನವರಿ 31 ಕೊನೆಯ ದಿನವಾಗಿದ್ದು , ಬೆಳಿಗ್ಗೆ 10.00 ರಿಂದ ಸಂಜೆ 05.00 ಗಂಟೆಯ ತನಕ ಅವಕಾಶ ಕಲ್ಪಿಸಿದೆ. ಸದಸ್ಯರ ಹೆಸರು ತಿದ್ದುಪಡಿ, ಸೇರ್ಪಡೆ, ಫೊಟೋ ಬದಲಾವಣೆ, ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆಗೆ ತಾಲೂಕಿನ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಸೇವೆ ಲಭ್ಯವಿದೆ....

2025 ಎಲ್ಲರಿಗೂ ಒಳಿತನ್ನು ಮಾಡಲಿ, ಎಲ್ಲರೂ ಒಳಿತನ್ನೇ ಮಾಡಲಿ…

ಅಂತೂ 2024ನೇ ವರ್ಷ ಮುಗಿದು 2025ನೇ ನೂತನ ವರ್ಷದ ಹೊಸ್ತಿಲಿನಲ್ಲಿ ನಾವಿಂದು ನಿಂತಿದ್ದೇವೆ. ನಾವೆಲ್ಲರೂ 2024ನೇ ವರ್ಷಕ್ಕೆ ವಿದಾಯ ತಿಳಿಸಿ 2025ನೇ ವರ್ಷದತ್ತ ಹೋಗುತ್ತಿರುವ ಈ ಸಂದರ್ಭದಲ್ಲಿ 2024ನೇ ವರ್ಷವು ನಮ್ಮ ಬದುಕಿನಲ್ಲಿ ಏನೇನು ಬದಲಾವಣೆಗಳನ್ನು ತಂದಿದೆ, 2024ನೇ ವರ್ಷದಲ್ಲಿ ನಮ್ಮ ಜೀವನದಲ್ಲಿ ಏನೇನು ಘಟನಾವಳಿಗಳು ನಡೆದಿವೆ ಎಂದು ನಾವು ಒಂದು ಕ್ಷಣ ಯೋಚಿಸಿ ಮೆಲುಕು...
Loading posts...

All posts loaded

No more posts

error: Content is protected !!